ಸಾರಥಿಗಾಗಿ ಕಾಸ್ಟ್ ಕಟ್ ಮಾಡುವರೆ ಚಂದ್ರು?ದರ್ಶನ್ ನಾಯಕತ್ವದಲ್ಲಿ ಕೆ.ಸಿ.ಎನ್. ಚಂದ್ರಶೇಖರ್ ಸಿನಿಮಾ ಮಾಡುತ್ತಾರೆ ಎಂದು ಬಹುದಿನಗಳಿಂದ ಗಾಂಧಿನಗರದಲ್ಲಿ ಕೇಳಿಬರುತ್ತಿದ್ದ ಮಾತು ಕೊನೆಗೂ ಕಾರ್ಯರೂಪಕ್ಕೆ ಬಂದಿದೆ. ನವೆಂಬರ್ 19ರ ಗುರುವಾರ ಸಾರಥಿ ಸೆಟ್ಟೇರಿದೆ. ದರ್ಶನ್ ನಾಯಕತ್ವದ ಸಾರಥಿ ಚಿತ್ರಕ್ಕೆ ಅವರ ಸೋದರ ದಿನಕರ್ ತೂಗುದೀಪ್ ನಿರ್ದೇಶಕರು. ಚಿತ್ರದಲ್ಲಿ ದರ್ಶನ್ ಆಟೋ ಚಾಲಕ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಸಂಪತ್ತಿಗೆ ಸವಾಲ್ ಚಿತ್ರದ ಮಂಜುಳಾ ಅವರನ್ನು
ಪೊರ್ಕಿಯಲ್ಲಿ ಐಟಂ ಬೆಡಗಿ ಜುಬೇದಾ ಕುಣಿತ!ತೆಲುಗು 'ಪೋಕಿರಿ' ಚಿತ್ರದ ರೀಮೇಕ್ 'ಪೊರ್ಕಿ'ಗೆ ಮಾತಿನ ಜೋಡಣೆ ಕಾರ್ಯ ಮುಕ್ತಾಯವಾಗಿದೆ. ದರ್ಶನ್ ನಾಯಕ ನಟನಾಗಿರುವ ಚಿತ್ರಕ್ಕೆ ಹೊಸ ಮುಖ ಪ್ರಣೀತಾ ನಾಯಕಿ. ಐಟಂ ಹಾಡುಗಳಿಗೆ ಖ್ಯಾತರಾಗಿರುವ ಮುಮ್ತಾಜ್ ಖಾನ್ ಸಹೋದರಿ ಜುಬೇದಾ ಈ ಚಿತ್ರದ ಹಾಡೊಂದರಲ್ಲಿ ಕುಣಿದಿರುವುದು ವಿಶೇಷ.ಡ್ಯೂಪ್ ಕಲಾವಿದರನ್ನು ಬಳಸದೆ ಸ್ವತಃ ದರ್ಶನ್ ಅವರೇ ಫೈಟ್ ದೃಶ್ಯಗಳಲ್ಲಿ ಅಭಿನಯಿಸಿರುವುದು ಚಿತ್ರದ ಮತ್ತೊಂದು ಗಮನಾರ್ಹ..
ವಿಜಯ್ ಅಭಿನಯದ 'ದೇವ್ರು' ಈ ವಾರರಾಕ್ಲೈನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸಿರುವ ‘ದೇವ್ರು ಚಿತ್ರ ನವೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಸಾಧು ಕೋಕಿಲ ಸಂಗೀತ ನೀಡಿ, ನಿರ್ದೇಶಿಸಿರುವ ಈ ಚಿತ್ರದಲ್ಲಿ ವಿಜಯ್ ನಾಯಕರಾಗಿ ನಟಿಸಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಅವರಿಗೆ ಪ್ರಜ್ಞಾ ನಾಯಕಿಯಾಗಿ ಅಭಿನಯಿಸಿದ್ದಾರೆ. ದೇವ್ರು ಚಿತ್ರ ತಮಿಳಿನ 'ಥಾಲೈ ನಗರಂ' ಚಿತ್ರದ ರೀಮೇಕ್. ಕತೆಯನ್ನು ಕೊಂಚ..
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ಸಾರಥಿ'ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರಕ್ಕೆ 'ಸಾರಥಿ' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಕೆ ಸಿ ಎನ್ ಚಂದ್ರಶೇಖರ್ ನಿರ್ಮಿಸುತ್ತಿದ್ದು ದರ್ಶನ್ ಅವರ ಸಹೋದರ ದಿನಕರ್ ತೂಗುದೀಪ ಆಕ್ಷನ್, ಕಟ್ ಹೇಳಲಿದ್ದಾರೆ. ಸಾರಥಿ ಚಿತ್ರೀಕರಣ ನವೆಂಬರ್ 19ರಿಂದ ಆರಂಭವಾಗಲಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರಕ್ಕೆ ಛಾಯಾಗ್ರಹನ ಕೃಷ್ಣಕುಮಾರ್ ಮತ್ತು ರವಿವರ್ಮ ಅವರ ಸಾಹಸ ನಿರ್ದೇಶನವಿದೆ...
ಪ್ರಭುದೇವಾಗೆ ಕನ್ನಡ ಸಿನ್ಮಾ ಮಾಡುವಾಸೆ!ಕುರುಚಲು ಗಡ್ಡ. ನಗುವಿನ ಮೀಮಾಂಸೆಗೆ ಮತ್ತಷ್ಟು ಪುಷ್ಟಿ ನೀಡುವ ಮೀಸೆ. ದಾಳಿಂಬೆ ಬೀಜಕ್ಕೆ ಬಿಳೀ ಬಣ್ಣ ಬಳಿದಿಟ್ಟಂತಿರುವ ದಂತಪಂಕ್ತಿಗಳು. ಕುಣಿಯಲು ನಿಂತರೆ ಅವರ ಮಾತನ್ನೇ ಕೇಳದ ಕೈ ಕಾಲುಗಳು. ರೊಬೊಟ್ ಥರ ರಿಮ್ ಜಿಮ್ ಎನ್ನುವ ಕುತ್ತಿಗೆ. ನೆಲವನ್ನೇ ನಾಚಿಸಿ, ಬೆಚ್ಚಿ ಬೀಳಿಸುವಂಥ ಕುಣಿತ...ಇಂತಿಪ್ಪ ಪ್ರಭುದೇವ ಮೊದಲ ಬಾರಿಗೆ ಕಿರುತೆರೆ ವಾಹಿನಿಗೆ ಬಂದಿದ್ದರು. ಆ ಮೂಲಕ Down..
ಕನ್ನಡ ಚಿತ್ರರಂಗದ ದೊಡ್ಡಣ್ಣನಿಗೆ ಅರುವತ್ತುಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಮತ್ತು ಹಾಸ್ಯ ನಟ ದೊಡ್ಡಣ್ಣ' ಅರುವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 300ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ದೊಡ್ಡಣ್ಣ ಶಿವಮೊಗ್ಗ್ಗ ಬಳಿಯ ತಮ್ಮ ಹುಟ್ಟೂರಿನಲ್ಲಿ ನಂತರ ಬೆಂಗಳೂರು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇಸ್ಕಾನ್ ಮಂದಿರದಲ್ಲಿ ಭಾನುವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.ದೊಡ್ಡಣ್ಣ ಮತ್ತವರ ಪತ್ನಿ ಶಾಂತಮ್ಮ ಪರಸ್ಪರ ಹೂಮಾಲೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದರೆ ಸಾಂಪ್ರದಾಯಿಕ..
ಶೀಘ್ರದಲ್ಲೇ 'ಸೂರ್ಯಕಾಂತಿ' ಧ್ವನಿಸುರುಳಿಅವಿಘ್ನ ಮೀಡಿಯ ವತಿಯಿಂದ, ಎಂ. ವಾಸು ಅರ್ಪಿಸುವ, ಬಿ.ಎನ್. ಸುಜಾತ ನಿರ್ಮಿಸುತ್ತಿರುವ 'ಸೂರ್ಯಕಾಂತಿ' ಚಿತ್ರಕ್ಕೆ ಆಕಾಶ್ ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಹಿನ್ನಲೆ ಸಂಗೀತ ನೀಡಲಾಗುತ್ತಿದೆ. ‘ಆ ದಿನಗಳು ಚಿತ್ರದ ನಂತರ ಕೆ.ಎಂ. ಚೈತನ್ಯ ನಿರ್ದೇಶಿಸುತ್ತಿರುವ ದ್ವಿತೀಯ ಚಿತ್ರ ಇದು. ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಸೂರ್ಯಕಾಂತಿಗೆ ಸಂಗೀತ ಸಂಯೋಜಿಸಿದ್ದು, ಸದ್ಯದಲೇ ಚಿತ್ರದ ಧ್ವನಿಸುರುಳಿಗಳು ಬಿಡುಗಡೆಯಾಗಲಿದೆ...
ಅರ್ಜುನ್ ಸರ್ಜಾ ಗ್ಲಾಡಿಯೇಟರ್ಅರ್ಜುನ್ ಸರ್ಜಾ ಕನ್ನಡದ ಚಿತ್ರಕ್ಕೆ ಮತ್ತೆ ಬಣ್ಣಹಚ್ಚುವುದು ಖಾತರಿಯಾಗಿದೆ. ಅವರು ಕಸುವುಳ್ಳ ವಸ್ತುವಿನ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಅವರು ನಂಬಿರುವುದು ನಿರ್ದೇಶಕ ನಾಗಾಭರಣ ಅವರನ್ನು. ನಾಗಾಭರಣ ‘ಗ್ಲಾಡಿಯೇಟರ್’ ಚಿತ್ರವನ್ನು ಅರ್ಧ ಡಜನ್ ಸಲ ಈಗಾಗಲೇ ನೋಡಿದ್ದು, ಅದಕ್ಕೆ ಹೋಲುವ ಕನ್ನಡದ ಜಾಯಮಾನದ ಕಥೆಯ ಹುಡುಕಾಟದಲ್ಲಿದ್ದಾರೆ. ಯಾವುದೂ ಸಿಗದೇಹೋದರೆ ಅದನ್ನೇ ಆಧರಿಸಿ ಚಿತ್ರಕಥೆ ಮಾಡುವ ಉದ್ದೇಶ ಅವರದ್ದು. ಈ ಬಾರಿ..
ಜಾಕಿ ಶ್ರಾಫ್ 'ಆ ಮರ್ಮ' ಡಬ್ಬಿಂಗ್ ಚಿತ್ರವೇ?'ಆ ಮರ್ಮ' ಕನ್ನಡಸೇರಿದಂತೆ ತಮಿಳು, ತೆಲುಗು ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಜಾಕ್ರಿ ಶ್ರಾಫ್ ಕನ್ನಡದಲ್ಲಿ ಮತ್ತೊಮ್ಮೆ ಕಾಣಿಸುತ್ತಿರುವುದು. ಹಾಗಿದ್ದರೆ ಈ ಚಿತ್ರ ಡಬ್ಬಿಂಗ್ ಚಿತ್ರವೇ? ಈ ಪ್ರಶ್ನೆಯನ್ನು ಚಿತ್ರದ ನಿರ್ದೇಶಕ ಮಧುಸೂಧನ್ ಅವರನ್ನು ಕೇಳಿದರೆ, ಬೆಂಗಳೂರಿನಲ್ಲಿ 11 ದಿನಗಳ ಕಾಲ ಚಿತ್ರೀಕರಿಸಿದ್ದೇವೆ. ಉಳಿದ ಭಾಗವನ್ನು ಮುಂಬೈ ಸೇರಿದಂತೆ ಹಲವು..
'ಮೊದಲ ಸಲ' ಯಶ್ ಗೆ ಜತೆಯಾದ ಮಲ್ಲು ಭಾಮಾಕರ್ನಾಟಕ ಟಾಕೀಸ್ ಲಾಂಛನದಡಿಯಲ್ಲಿ ಯೋಗೀಶ್‌ನಾರಾಯಣ್ ಹಾಗೂ ಮಲ್ಲಿಕಾರ್ಜುನ್ ಗದಗ ನಿರ್ಮಿಸುತ್ತಿರುವ 'ಮೊದಲಸಲ' ಚಿತ್ರದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯುತ್ತಿದೆ. ಮಂಜಿನೂರಿನಲ್ಲಿ 25 ದಿನಗಳ ಚಿತ್ರೀಕರಣ ನಡೆಯಲಿದ್ದು, ಕೆಲವು ದೃಶ್ಯ ಹಾಗೂ ಎರಡು ಗೀತೆಗಳು ಈ ಭಾಗದಲ್ಲಿ ಚಿತ್ರೀಕರಣಗೊಳಲಿದೆ ಎಂದು ನಿರ್ದೇಶಕ ಪುರುಷೋತ್ತಮ ತಿಳಿಸಿದ್ದಾರೆ. ನಾಯಕ ಯಶ್, ಭಾಮಾ, ರಂಗಾಯಣರಘು, ಅವಿನಾಶ್, ಶರಣ್, ವಿನಯಾಪ್ರಸಾದ್, ಮೈಸೂರು ದಯಾನಂದ್ ಮುಂತಾದ ಕಲಾವಿದರು..