ನೆರೆ ಸಂತ್ರಸ್ತರಿಗೆ ಕೆಸಿಎನ್ ರು.1ಲಕ್ಷ ದೇಣಿಗೆಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನಿಧಿಗೆ ರು.1 ಲಕ್ಷ ದೇಣಿಗೆ ನೀಡಿದ್ದಾರೆ. ಚಂದ್ರು ನಿರ್ಮಾಣದ 'ಸಾರಥಿ' ಚಿತ್ರದ ಮುಹೂರ್ತದಲ್ಲಿ ಈ ನೆರೆ ಪರಿಹಾರವನ್ನು ಅವರು ಪ್ರಕಟಿಸಿದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಚಿತ್ರದ ನಾಯಕ ನಟನಾಗಿರುವ ಈ ಚಿತ್ರವನ್ನು ದಿನಕರ್ ತೂಗುದೀಪ ನಿರ್ದೇಶಿಸುತ್ತಿದ್ದಾರೆ.ಕೆಸಿಎನ್ ಚಂದ್ರಶೇಖರ್ ಸ್ವಂತ ಬ್ಯಾನರ್
ಬೆಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ತಾರೆ ಜಮೀನ್ ಪರ್ಬೆಂಗಳೂರಿನಲ್ಲಿರುವ ವೃತ್ತಿನಿರತರ ಕ್ಲಬ್ಬುಗಳಲ್ಲಿ ಕುಡಿತ ಮತ್ತು ಇಸ್ಪೀಟು ಆಟಕ್ಕೆ ಹೆಚ್ಚು ಪ್ರಾಧಾನ್ಯತೆ. ವಿಶೇಷ ಸಂದರ್ಭಗಳಲ್ಲಿ, ವಾರಾಂತ್ಯಗಳಲ್ಲಿ ಸದಸ್ಯರ ಕುಟುಂಬಗಳು ಕಲೆತು ಕಾಲಕಳೆಯುವಂತಹ ವಾತಾವರಣ ಬೆಂಗಳೂರು ಕ್ಲಬ್ ಸಂಸ್ಕೃತಿಯಲ್ಲಿ ತೀರ ಕಡಿಮೆ. ನ್ಯೂಸ್ ಪೆಗ್ಗಿಗೋಸ್ಕರ ಒಂದೆರಡು ಪೆಗ್ಗು ಹಾಗೂ ಉದ್ಯೋಗ ಮಿತ್ರರೊಡನೆ ಅನೌಪಚಾರಿಕ ಹರಟೆ ಮಾತ್ರವಲ್ಲದೆ ಇನ್ನಿತರ ಉಲ್ಲಾಸದಾಯಕ, ಆರೋಗ್ಯಕರ ಚಟುವಟಿಕೆಗಳನ್ನು ರೂಪಿಸುವುದರಲ್ಲಿ ಕ್ಲಬ್ ಆಡಳಿತ ವರ್ಗಗಳು ಹಿಂದೆ..
ಡೆಡ್ಲಿ ಸೋಮನ ಬೆನ್ನತ್ತಿದ ರವಿ ಶ್ರೀವತ್ಸ!ರವಿ ಶ್ರೀವತ್ಸ ಮತ್ತೆ ಆಕ್ಷನ್, ಕಟ್ ಹೇಳಲಿದ್ದಾರೆಯೇ? ಹೌದು ಎನ್ನುತ್ತವೆ ಗಾಂಧಿನಗರ ಮೂಲಗಳು. 'ಡೆಡ್ಲಿ ಸೋಮ' ಚಿತ್ರ ರವಿ ಶ್ರೀವತ್ಸ ನಿರ್ದೇಶನದ ಮೊದಲ ಚಿತ್ರ. ನಂತರ ಬಂದ ರವಿ ಶ್ರೀವತ್ಸ ಅವರ ರಾಜೀವ್, ಗಂಡ ಹೆಂಡತಿ ಮತ್ತು ಮಾದೇಶ ಚಿತ್ರಗಳು ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದ್ದು ಇತಿಹಾಸ. ಓಂ ಚಿತ್ರ ಮತ್ತೆ ಮಾಡುತ್ತೇನೆ. ರಾಜ್ ಮಕ್ಕಳನ್ನು ಒಂದೇ ಸಿನಿಮಾದಲ್ಲಿ..
'ಭಕ್ತ ಅಂಬರೀಷ'ನಿರ್ಮಿಸಲು ಪಾರ್ವತಮ್ಮ ವಿಶ್ವಾಸವರನಟ ಡಾ.ರಾಜಕುಮಾರ್ ಅವರ ಕನಸು 'ಭಕ್ತ ಅಂಬರೀಷ' ಕಡೆಗೂ ನೆರವೇರಲಿಲ್ಲ. ಇದೀಗ 'ಭಕ್ತ ಅಂಬರೀಷ' ಚಿತ್ರವನ್ನು ಪುನೀತ್, ರಾಘವೇಂದ್ರ ಮತ್ತು ಶಿವರಾಜ್ ಕುಮಾರ್ ಅವರೊಂದಿಗೆ ಮಾಡುವುದಾಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಆಶಾಭಾವ ವ್ಯಕ್ತಪಡಿಸಿದ್ದಾರೆ.ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ವಿಶಿಷ್ಟ ಕಾರ್ಯಕ್ರಮ 'ಬೆಳ್ಳಿ ಹೆಜ್ಜೆ'ಯಲ್ಲಿ ಪಾರ್ವತಮ್ಮ ತಮ್ಮ ಮನದಾಳದ ಮಾತುಗಳನ್ನು ಸಹೃದಯರೊಂದಿಗೆ..
ಜಗ್ಗೇಶ್, ಕೋಮಲ್ ಡಬಲ್ ಕಾಮಿಡಿ ಲಿಫ್ಟ್ ಕೊಡ್ಲಾನವರಸ ನಾಯಕ ಜಗ್ಗೇಶ್ ಮತ್ತು ಅವರ ಸಹೋದರ ಕೋಮಲ್ ಒಟ್ಟಾಗಿ ನಟಿಸಲಿರುವ ಚಿತ್ರಕ್ಕೆ 'ಲಿಫ್ಟ್ ಕೊಡ್ಲಾ' ಎಂದು ಹೆಸರಿಡಲಾಗಿದೆ. ಈ ಹಿಂದೆ ಈ ಚಿತ್ರಕ್ಕೆ 'ವೈಕುಂಠ ಎಕ್ಸ್ ಪ್ರೆಸ್'ಎಂದು ನಾಮಕರಣ ಮಾಡಲಾಗಿತ್ತು. ಆದರೆ ಇದೀಗ ಈ ಚಿತ್ರಕ್ಕೆ 'ಲಿಫ್ಟ್ ಕೊಡ್ಲಾ?' ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ. 'ಸ್ವರ್ಗಕ್ಕೆ ಮೂರೇ ಗೇಣು' ಎಂಬುದು ಚಿತ್ರದ ಅಡಿಬರಹ.ಜಗ್ಗೇಶ್ ಮತ್ತು ಕೋಮಲ್ ಕಿಲಾಡಿ..
ಶೇಕಡವಾರು ಪದ್ಧತಿಗೆ ಫಿಲಂ ಚೇಂಬರ್ ಅಸ್ತು!ಹಂಚಿಕೆ ವಿಚಾರವಾಗಿ ಕನ್ನಡ ಚಲನಚಿತ್ರ ನಿರ್ಮಾಪಕರು ಮತ್ತು ಚಿತ್ರಮಂದಿರ ಮಾಲೀಕರ ನಡುವಿನ ಗುದ್ದಾಟಕ್ಕೆ ಇಂದು ತೆರೆ ಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ಸೋಮವಾರ (ನ.16) ನಡೆದ ಸಭೆಯಲ್ಲಿ ಶೇಕಡವಾರು ಪದ್ಧತಿಯನ್ನು ಅಂಗೀಕರಿಸಲಾಯಿತು. ಶೇಕಡವಾರು ಪದ್ಧತಿಯಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಎಂಬುದು ನಿರ್ಮಾಪಕರ ಒತ್ತಾಯವಾಗಿತ್ತು. ಇದಕ್ಕೆ ಚಿತ್ರಮಂದಿರದ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಾಡಿಗೆ ಪದ್ಧತಿಯಲ್ಲಿ ಚಿತ್ರಗಳನ್ನು..
ಡಿಸೆಂಬರ್ ನಲ್ಲಿ ಯೋಗರಾಜಭಟ್ ಹೊಸ ಚಿತ್ರನಿರ್ದೇಶಕ ಯೋಗರಾಜ ಭಟ್ ತಮ್ಮ ಗೆಳೆಯ ಸೂರಿಯ ಹಾದಿಯನ್ನು ತುಳಿಯುತ್ತಿದ್ದಾರೆ. ಅಂದರೆ ಕುಡುಕನ ಕಥೆಯನ್ನೋ, ಜಂಗ್ಲಿಯಂಥ ಮಸಾಲೆ ಸಿನಿಮಾವನ್ನೋ ನಿರ್ಮಿಸುತ್ತಿದ್ದಾರೆ ಎಂದರ್ಥವಲ್ಲ. ಪತ್ರಕರ್ತರನ್ನು ದೂರವಿಟ್ಟಿದ್ದಾರೆ ಎಂದೂ ಅರ್ಥವಲ್ಲ. ಇಂತಿ ನಿನ್ನ ಪ್ರೀತಿಯ ಚಿತ್ರಕ್ಕೆ ಸೂರಿ ಬಂಡವಾಳ ಹೂಡಿದ್ದರಲ್ಲ; ಅದು ಯೋಗರಾಜ ಭಟ್ ಅನುಸರಿಸುತ್ತಿರುವ ಮಾರ್ಗ. ಹಾಂ, ಭಟ್ ನಿರ್ಮಾಪಕರಾಗುತ್ತಿದ್ದಾರೆ!ಹಾಗೆ ನೋಡಿದರೆ ಭಟ್ಟರಿಗೆ ಸಿನಿಮಾ ನಿರ್ಮಾಣ ಹೊಸತೇನೂ ಅಲ್ಲ...
'ಟಿ20 ಆಫ್ಇಂಡಿಯನ್ ಸಿನಿಮಾ' ಸ್ಪರ್ಧೆಭಾರತೀಯ ಚಿತ್ರರಂಗದ ಅತ್ಯುತ್ತಮ 20 ಚಿತ್ರಗಳನ್ನು ಜನರಿಂದ ಆಯ್ಕೆ ಮಾಡುವ ‘ಟಿ20 ಆಫ್ ಇಂಡಿಯನ್ ಸಿನಿಮಾ’ ಹೆಸರಿನ ವಿನೂತನ ಸ್ಪರ್ಧೆಯನ್ನು ಎಂಟರ್‌ಟೇನ್‌ಮೆಂಟ್ ಸೊಸೈಟಿ ಆಫ್ ಗೋವಾ ಸಂಸೆ ಆಯೋ ಜಿಸಿದೆ. ಕನ್ನಡದ ಮೂರು ಚಿತ್ರಗಳು ಸೇರಿದಂತೆ ನಾನಾ ಭಾಷೆಯ ಒಟ್ಟು 100 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಇದರಲ್ಲಿ 20 ಅತ್ಯುತ್ತಮ ಚಿತ್ರವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದೇವೆ ಎಂದು..
ಶೇಕಡಾವಾರು ಹಂಚಿಕೆ ಮತ್ತು ಟೆನ್ತ್ ಪಾಠಈಗಿರುವ ಥಿಯೇಟರ್‌ಗಳ ಬಾಡಿಗೆ ಪದ್ಧತಿ ಕೈಬಿಟ್ಟು, ಶೇಕಡಾವಾರು ಲೆಕ್ಕದಲ್ಲಿ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ದೊರೆಯಬೇಕು ಎಂದು ನಿರ್ಮಾಪಕರ ಸಂಘ ವಾದ ಮಂಡಿಸುತ್ತಿದೆಯಷ್ಟೇ. ಈ ಶೇಕಡಾವಾರು ಲೆಕ್ಕಾಚಾರ ಜಾರಿಗೆ ಬಂದರೆ ಥಿಯೇಟರ್‌ಗಳ ಸ್ಥಿತಿಗತಿ ಹೇಗಿರಬಹುದು? ಕಳೆದ ವಾರ ಹೀಗಾಯಿತು; ದಿಲ್ ಸತ್ಯ ನಿರ್ದೇಶನದ 'ಟೆನ್ತ್ ಕ್ಲಾಸ್ ಎ ಸೆಕ್ಷನ್' ಸಿನಿಮಾ ಕಳೆದ ವಾರ ತೆರೆಕಂಡಿದ್ದು ನೆನಪಿದೆಯಷ್ಟೇ. ಈ ಚಿತ್ರವನ್ನು..
ಅರ್ಧ ಶತಕ ಬಾರಿಸಿದ ಭಟ್ಟರ 'ಮನಸಾರೆ'ಯೋಗರಾಜ್ ಭಟ್ ರ ಸ್ವಮೇಕ್ ಚಿತ್ರ 'ಮನಸಾರೆ' ರಿಮೇಕ್ ಚಿತ್ರಗಳಿಗೆ ಸಡ್ಡು ಹೊಡೆದುಅರ್ಧ ಶತಕ ಬಾರಿಸಿದೆ. ಗಾಂಧಿನಗರದ ಸಿದ್ಧ ಸೂತ್ರಗಳಿಗೆ ಒಂದು ರೀತಿ ಕೊಡಲಿ ಪೆಟ್ಟು ಕೊಟ್ಟಿದೆ 'ಮನಸಾರೆ' ಚಿತ್ರ. ರಾಜ್ಯಾದ್ಯಂತ 15ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಮನಸಾರೆ' ಐವತ್ತು ದಿನಗಳನ್ನು ಪೂರೈಸಿದೆ.ಬಿಡುಗಡೆಯಾಗಿರುವ ಕೇಂದ್ರಗಳಲ್ಲೆಲ್ಲಾ ಮನಸಾರೆ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನಿಷ್ಠ ಹತ್ತು ಕೇಂದ್ರಗಳಲ್ಲಾದರೂ ಶತಕ..