clear
clear
clear
clear
ಮುಖಪುಟ » ಚಲನಚಿತ್ರ » ಕಿರಿಕಿರಿ
ಕನ್ನಡ ಚಿತ್ರರಂಗದ ವಾದವಿವಾದ

ಪ್ರಕಾಶ್ ರೈ, ಲಲಿತಾ ವಿವಾಹ ವಿಚ್ಛೇದನಕ್ಕೆ ಒಪ್ಪಿಗೆ
ನಟ, ನಿರ್ದೇಶಕ ಮತ್ತು ನಿರ್ಮಾಪಕ ಪ್ರಕಾಶ್ ರೈ ಅವರಿಗೆ ಕಡೆಗೂ ಪತ್ನಿ ಲಲಿತಾ ಕುಮಾರಿಯಿಂದ ವಿವಾಹ ವಿಚ್ಛೇದನ ದೊರಕಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ಬಿ ರಾಮಲಿಂಗಂ ಅವರು ಪ್ರಕಾಶ್ ರೈ ಮತ್ತು ಲಲಿತಾ ಕುಮಾರಿ ವಿವಾಹ ವಿಚ್ಛೇದನಕ್ಕೆ ಬುಧವಾರ ಅನುಮತಿ ನೀಡಿದ್ದಾರೆ. ಈ ಹಿಂದೆ ಪ್ರಕಾಶ್ ರೈ ದಂಪತಿಗಳನ್ನು ಒಂದು ಮಾಡಲು ಕಾನೂನನ್ನು


ಉಡ ಚಿತ್ರದ ಹೀರೋ ಮೇಲೆ ಮಾರಣಾಂತಿಕ ಹಲ್ಲೆ
ಕನ್ನಡದ 'ಉಡ' ಚಿತ್ರದ ನಾಯಕ ನಟ ಯುವರಾಜ್ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವರಾಜ್ ಕೆನ್ನೆಯ ಎರಡು ಬದಿಗಳಲ್ಲಿ ಬ್ಲೇಡ್ ನಿಂದ ಹಾಗೂ ಕಾಲಿಗೆ ಮಚ್ಚಿನಿಂದ ಗಾಯಗೊಳಿಸಲಾಗಿದೆ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಹಳೆಯ ವೈಷಮ್ಯವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಸಂಭಾವನೆ ವಿಚಾರವಾಗಿ..


ಜಿಮ್ ಟ್ರೈನರ್ ಜತೆ ಲಕ್ಷ್ಮಿ ರೈ ಸ್ನೇಹಾನಾ ಪ್ರೀತಿನಾ?
ದಕ್ಷಿಣ ಭಾರತದ ಜನಪ್ರಿಯ ನಟಿ ಲಕ್ಷ್ಮಿ ರೈ ಹಾಗೂ ಆಕೆಯ ವ್ಯಾಯಾಮ ತರಬೇತುದಾರ ಪ್ರಸಾದ್ ಅವರೊಂದಿಗೆ ಸಂಬಂಧ ಇದೆ ಎಂಬ ಸುದ್ದಿಯನ್ನು ತಮಿಳು ದಿನಪತ್ರಿಕೆಯೊಂದು ಪ್ರಕಟಿಸಿ ಗುಲ್ಲೆಬ್ಬಿಸಿತ್ತು. ಆದರೆ ಈ ಸುದ್ದಿಯನ್ನು ಲಕ್ಷ್ಮಿ ರೈ ತಳ್ಳಿಹಾಕಿದ್ದಾರೆ. ಇದೊಂದು ಕೇವಲ ವದಂತಿ ಅಷ್ಟೆ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಲಕ್ಷ್ಮಿ ರೈ ಮಾತನಾಡುತ್ತಾ, ತಳಬುಡವಿಲ್ಲದ ಈ ರೀತಿಯ ಸುದ್ದಿಗಳನ್ನು..


ನಟಿ ಶ್ರುತಿ ಬದುಕು ಮತ್ತೆ ಅತಂತ್ರ; ಗಳಗಳ
ನಿರ್ದೇಶಕ ಎಸ್.ಮಹೇಂದರ್‌ಗೆ ಸೋಡ ಚೀಟಿ ನೀಡಿ ಚಂದ್ರಚೂಡ್ ಅಲಿಯಾಸ್ ಚಕ್ರವರ್ತಿ ಜತೆ ಸಹ ಬಾಳ್ವೆ ನಡೆಸುತ್ತಿದ್ದ ನಟಿ ಶ್ರುತಿ ಬದುಕು ಮತ್ತೆ ಅತಂತ್ರವಾಗಿದೆ. ಸದ್ಯಕ್ಕೆ ಚಂದ್ರಚೂಡ್ ಕೂಡ ಆಕೆಯ ಜತೆ ಕಿತ್ತಾಡಿಕೊಂಡು ಮನೆಯಿಂದ ಹೊರ ಬಿದ್ದಿದ್ದಾನೆ. ಅಲ್ಲಿಗೆ ಶ್ರುತಿ ಕತೆ ತಬ್ಬಲಿಯು ನೀನಾದೆ ಮಗಳೇ....ಮಹೇಂದರ್‌ಗೆ ಮಗಳನ್ನು ಸಾಕುವ ತಾಕತ್ತಿಲ್ಲ. ನನ್ನ ಎಲ್ಲ ವಿಷಯಗಳಲ್ಲಿ ಮೂಗು ತೂರಿಸುತ್ತಾರೆ. ಹಲವಾರು..


ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ: ಅಮೃತಾರಾವ್
'ಮದುವೆಗೂ ಮುನ್ನ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ' ಎಂದು ಈಗಾಗಲೇ ಹಲವಾರು ನಟಿಯರು ಹಲವಾರು ಸಲ ಹೇಳಿ ವಿವಾದಕ್ಕೆ ಸಿಕ್ಕಿಕ್ಕೊಂಡಿದ್ದರು. ಇದೀಗ ಆ ಸಾಲಿಗೆ ಹೊಸದಾಗಿ ಬಾಲಿವುಡ್ ನಟಿ ಅಮೃತಾರಾವ್ ಸೇರ್ಪಡೆಯಾಗಿದ್ದಾರೆ. ''ಮದುವೆಗೂ ಮುನ್ನ ಹೆಣ್ಣುಮಕ್ಕಳು ವಿವಾಹಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ತಪ್ಪೇನು ಇಲ್ಲ'' ಎಂದು ಅಮೃತಾರಾವ್ ಹೇಳಿದ್ದಾರೆ. ಆಕೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ..


'ಹೋರಿ'ಯ ಒದೆತಕ್ಕೆ ನಿರ್ಮಾಪಕನೇ ಹೈರಾಣ!
ಮಾಗಡಿ ಪಾಂಡು ನಿರ್ದೇಶಿಸುತ್ತಿರುವ, ವಿನೋದ್ ಪ್ರಭಾಕರ್ ಅಭಿನಯದ 'ಹೋರಿ' ಚಿತ್ರ ಎಲ್ಲಿಗೆ ಬಂದಿದೆ? ಅದರ ನಿರ್ಮಾಪಕ ಲಿಂಗೇಗೌಡರನ್ನು ಕೇಳಿದರೆ 'ಸ್ವಾಮಿ, ಹೋರಿ ವಿಪರೀತ ಹುಲ್ಲು ತಿನ್ತೈತೆ. ಈ ಕಡೆ ಕಟ್ಟಿ ಹಾಕೋದಕ್ಕೂ ಆಗದೆ, ವಿಲೇವಾರಿನೂ ಮಾಡಕ್ಕಾಗದೆ ಒಂದೇ ಒದೆತ. ಹಾಳು ಬಿದ್ದು ಹೋಗಲಿ ಎಂದು ಬಿಟ್ಟು ಹೋಗೋ ಹಾಗೂ ಇಲ್ಲ. ಬೇಜಾನ್ ದುಡ್ಡು ಹಾಕ್ಬಿಟ್ಟೀವ್ನಿ' ಅಂತ ನೊಂದುಕೊಳ್ಳುತ್ತಾರೆ.'ಹೋರಿ'ಸಿನಿಮಾ..


ಮಲಯಾಳಂನಲ್ಲಿ ಸಾಕಷ್ಟು ಅವಕಾಶಗಳಿವೆ: ಬಾಬು
''ದಿನೇಶ್ ಬಾಬು ಕ್ರಿಯಾಶೀಲತೆ ಕಳೆದುಕೊಂಡಿದ್ದಾರೆ. ಒಳ್ಳೆಯ ಚಿತ್ರಗಳನ್ನು ಕೊಡುವುದನ್ನು ಬಿಟ್ಟು ಹಣದ ಹಿಂದೆ ಬಿದ್ದಿದ್ದಾರೆ. ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳನ್ನು ಇಟ್ಟುಕೊಂಡು ಯಾವುದನ್ನೂನೆಟ್ಟಗೆ ಮಾಡುತ್ತಿಲ್ಲ'' ಎಂದು ನಿರ್ಮಾಪಕ ಮಂಜು ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ ಮಂಜು ಕಡೆಗೆ ಇದೀಗ ದಿನೇಶ್ ಬಾಬು ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ.ಮಂಜು ಅವರ ಪ್ರಶ್ನೆಗಳು ಉತ್ತರಕ್ಕೆ ಯೋಗ್ಯವಲ್ಲ. ಇಲ್ಲ ಸಲ್ಲದ ಮಾತುಗಳಿಂದ ತಮ್ಮನ್ನು ತಾವು..


ಮಳವಳ್ಳಿ ಸಾಯಿ ಕೃಷ್ಣಗೆ 'ಬಳೆ' ಚುಚ್ಚಿದ ಕಥೆ!
ಇದು ಭಾಗ್ಯದ ಬಳೆಗಾರ ಚಿತ್ರದ ವ್ಯಥೆಯ ಕಥೆ. ಶಿವರಾಜ್‌ಕುಮಾರ್ ಮೇಲಿನ ಪ್ರೀತಿಯಿಂದ ಚಿತ್ರಕ್ಕೆ ಸಂಭಾಷಣೆ ಬರೆಯಲು ಮಳವಳ್ಳಿ ಒಪ್ಪಿಕೊಂಡರು. ಸೆಟ್‌ಗೇ ಹೋಗಿ ಸಂಭಾಷಣೆ ತಿದ್ದುವ ಕೆಲಸವೂ ಸೇರಿದಂತೆ ಎರಡು ಲಕ್ಷ ರೂಪಾಯಿಗೆ ಮಾತುಕತೆಯಾಗಿತ್ತು. ಚಿತ್ರದಲ್ಲಿ ಸಾಯಿ ಒಂದು ಪಾತ್ರವನ್ನೂ ನಿರ್ವಹಿಸಿದ್ದರು. ಅದಕ್ಕೆ ಸಂಭಾವನೆಯೇನೂ ಇಲ್ಲ. ಆದರೆ, ಚಿತ್ರ ಮುಗಿದ ನಂತರವೂ ಅವರ ಸಂಭಾಷಣೆಗೆ ಬಾಕಿ ಸಂದಾಯವಾಗಲೇ ಇಲ್ಲ...


ಚಿತ್ರ ನಿರ್ದೇಶಕ ರತ್ನಜ ಬದಲಾಗಿದ್ದಾರಾ?
ನಿರ್ದೇಶಕ ರತ್ನಜ ಬದಲಾಗಿಲ್ಲವೇ? ಗೆದ್ದಾಗ ಅಹಂಕಾರ ಮೈಗೂಡುವುದೇನೋ ಸರಿ; ಆದರೆ ಸೋಲಿನಲ್ಲಿ ವಿನಯ ಮೈಗೂಡಬೇಕಲ್ಲವೇ?ಉಹುಂ, ರತ್ನಜ ಬದಲಾಗಿಲ್ಲ ಎಂದರು ಗಡ್ಡ ನೆರೆತ ಪತ್ರಕರ್ತರೊಬ್ಬರು. ಹೌದೌದು ಎಂದು ತಲೆದೂಗಿದರು ಮತ್ತೊಬ್ಬರು. ಪತ್ರಕರ್ತರ ಗುಸುಗುಸು ಕಿವಿಗೆ ಬೀಳದವರಂತೆ ಕುಳಿತಿದ್ದರು ರತ್ನಜ. ಅಂದಹಾಗೆ, ಅದು ಪ್ರೇಮಿಸಂ ಚಿತ್ರದ ಸುದ್ದಿಗೋಷ್ಠಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. ಮಾತನಾಡಿದ್ದೆಲ್ಲ ಸಂಗೀತ ನಿರ್ದೇಶಕ ಹಂಸಲೇಖಾ ಹಾಗೂ ಅಜಯ್‌ಗೌಡ...


ರತ್ನಜನ್ ರತ್ನನ್ ಪದಗಳ್ ಕೇಳುವಂತವರಾಗಿ
ನಾನು ಜೀವನದಲ್ಲಿ ಯಾರಿಗೆ ಮೋಸ ಮಾಡಿದ್ರೂ ಟೈಮಿಗೆ ಮೋಸ ಮಾಡಲ್ಲ. ನಂಗೆ ಸಮಯ ಅನ್ನೋದು ಜೀವನದ ಅಂಗ ಇದ್ದ ಹಾಗೆ. ಸರಿಯಾದ ಸಮಯಕ್ಕೆ ಬಾರದೇ ಪೋಸ್ ಕೊಡುವವರನ್ನು ಕಂಡರೆ ಕೆಂಡದಂಥ ಕೋಪ ಆತಾ ಹೈ! ನಿರ್ದೇಶಕ ರತ್ನಜ ಹಿಂದೊಮ್ಮೆ ಹೀಗೆ ಹೇಳಿದ್ದರು. ಹಾಗೆ ಹೇಳಲು ಕಾರಣವಿತ್ತು. ವಿಷಯಕ್ಕೆ ಬರುವ ಮುನ್ನ ಈ ಫ್ಲ್ಯಾಷ್‌ಬ್ಯಾಕ್ ಓದಿ... ಇದೇ ರತ್ನಜ..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು