clear
clear
clear
clear
ಮುಖಪುಟ » ಚಲನಚಿತ್ರ » Bollywood » ಪೂರ್ಣಪಾಠ
ರಾಜ್ ಅಭಿಮಾನಿಯಾಗಿದ್ದ ಫಿರೋಜ್ ಖಾನ್

Feroz was a Rajkumar fan
ಹೆಸರಾಂತ ಹಿಂದಿ ನಟ ಮತ್ತು ನಿರ್ದೇಶಕ ಫಿರೋಜ್ ಖಾನ್ ಬೆಂಗಳೂರಿನಲ್ಲಿರುವ ತನ್ನ ಫಾರ್ಮ್ ಹೌಸ್ ನಲ್ಲಿ ಏ.26 ರಂದು ನಿಧರಾಗಿದ್ದು ಗೊತ್ತೇ ಇದೆ. ಬೆಂಗಳೂರು, ಕನ್ನಡ ಭಾಷೆಯ ಬಗ್ಗೆ ಅವರ ಸಂಬಂಧ ಹೇಗಿತ್ತು? ಈ ಪ್ರಶ್ನೆಗೆ ಫಿರೋಜ್ ಖಾನ್ ಅವರ ಬಾಲ್ಯದ ಗೆಳೆಯ ಮಂಜುನಾಥ್ ಹೆಗಡೆ ಕೊಟ್ಟ ಉತ್ತರ ನಿಜಕ್ಕೂ ಎಂತಹವರನ್ನೂ ಮೂಕ ವಿಸ್ಮಯವಾಗಿಸುತ್ತದೆ.

''ಕರ್ನಾಟಕವನ್ನು ಅವರು ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲ ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದಖಾನ್ ನಾನು ಬೆಂಗಳೂರಿಗ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು'' ಎನ್ನುತ್ತಾರೆ ಮಂಜುನಾಥ . ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ ಅವರು ಇಲ್ಲಿನ ಹವಾಮಾನಕ್ಕೆ ಮಾರುಹೋಗಿ ತಮ್ಮ ಕೊನೇ ದಿನಗಳನ್ನು ಬೆಂಗಳೂರಿನಲ್ಲೇ ಕಳೆದರು. ವರನಟ ಡಾ.ರಾಜ್ ಅವರ ಅಭಿಮಾನಿಯೂ ಆಗಿದ್ದರು ಎನ್ನುತ್ತಾರೆ ಮಂಜುನಾಥ್.

ಫಿರೋಜ್ ಕೇವಲ ನಟ ಮಾತ್ರ ಆಗಿರಲಿಲ್ಲ ಅವರೊಬ್ಬ ಉತ್ತಮ ಕ್ರೀಡಾಪಟುವೂ ಆಗಿದ್ದರು. ಬಿಲಿಯರ್ಡ್ಸ್ ನಲ್ಲಿ ರಾಜ್ಯ ಮಟ್ಟದ ಚಾಂಪಿಯನ್ ಆಗಿದ್ದರು. ಮನೆಯಲ್ಲಿ ಹೆಚ್ಚಿನ ಸಮಯ ಬಿಲಿಯರ್ಡ್ಸ್ ಗಾಗಿ ಮೀಸಲಿಡುತ್ತಿದ್ದ ಫಿರೋಜ್ ಉತ್ತಮ ಬೋಜನ ಪ್ರಿಯರು ಆಗಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ಅವರ ನೆಚ್ಚಿನ ತಾಣವಾಗಿತ್ತು. ಮುಖ್ಯವಾಗಿ ರೇಸ್ ಕೋರ್ಸ್ ನಲ್ಲಿ ಪಂದ್ಯಗಳು ನಡೆಯುವಾಗ ತಾಜ್ ಹೋಟೆಲ್ ನಲ್ಲೇ ಹೆಚ್ಚಾಗಿ ಅಲ್ಲೇ ಕಳೆಯುತ್ತಿದ್ದರು. ಒಂದು ಜೊತೆ ಕುದುರೆಗಳನ್ನು ಹೊಂದಿದ್ದ ಅವರು ಉತ್ತಮ ಆಟಗಾರರು ಆಗಿದ್ದರು ಎಂಬ ಆಸಕ್ತಿಕರ ಅಂಶಗಳನ್ನು ಮಂಜುನಾಥ್ ಹೊರಗೆಡುಹಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ನಟ, ನಿರ್ದೇಶಕ ಫಿರೋಜ್ ಖಾನ್ ನಿಧನ
ಪುನೀತ್ ರಿಂದ ರಾಜ್ ಕುರಿತು ಅಪರೂಪ ಪುಸ್ತಕ
ರಾಜ್ ಮುಖ್ಯಮಂತ್ರಿಯಾಗಬಹುದಿತ್ತು:ಜಿಟಿಡಿ
ರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ
ನನ್ನ ಒಲುಮೆಯ ವ್ಯಕ್ತಿ ಡಾ.ರಾಜ್: ಅಮಿತಾಬ್
'ಡಾ.ರಾಜ್ ಜೀವನಧಾರೆ' ಡಿವಿಡಿ ಬಿಡುಗಡೆ

ಏಪ್ರಿಲ್ 30, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: Indian
ದಿನಾಂಕ: 04 May 2009 10:26 am
ಇದೆಲ್ಲ ಬರಿ ಸುಳ್ಳು . ಇಷ್ಟು ವರ್ಷಗಳಲ್ಲಿ ಈ ಸಾಬಿ ನನ್ನ ಮಗ ಒಂದು ದಿನ nu ಕನ್ನಡ ದ ಬಗ್ಗೆ ಅಥವಾ ಕನ್ನಡದಲ್ಲಿ ಮಾತಾಡಿಲ್ಲ. ಇವನು ಯಾವ ಮಂಜುನಾಥ, ನಮಗೆ ಟೋಪಿ ಹಾಕಲಿಕ್ಕೆ ಬರ್ತಾ ಇದ್ದಾನೆ.

ಇಂದ: ತೀಟೆ
ದಿನಾಂಕ: 01 May 2009 5:46 am
ಏನೆಲ್ಲ ಬೊಗಳೆ ಬಿಟ್ರು ಸೈ, ಮಸಾಣಕ್ಕೆ ಓದೋನು ಎದ್ದು ಬತ್ತಾನ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು