ನಾಳೆ ಗುರುವಾರ ವಿಶ್ವ ಶೌಚಾಲಯ ದಿನ. ಶೌಚಾಲಯ ಮತ್ತು ಸ್ವಚ್ಛತೆಯ ಅಗತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡಲು ಮುಡಿಪಾದ ದಿನ. ಶೌಚಾಲಯ ಸೇರಿದಂತೆ, ಚರಂಡಿ, ಶುದ್ಧ ಕುಡಿಯುವ ನೀರು, ಕಸ ನಿರ್ವಹಣೆ ಮೊದಲಾದ ಯಾವುದೇ ನೈರ್ಮಲ್ಯ ಸೌಲಭ್ಯಗಳಿಲ್ಲದೆ ಗಲೀಜು ಪರಿಸರ, ಅನಾರೋಗ್ಯ, ಬಡತನದಲ್ಲಿ ಸಿಲುಕಿರುವ ಕೋಟಿ ಕೋಟಿ ಜನರಿಗೆ ಶೌಚಾಲಯದ ಅಗತ್ಯವನ್ನು ಅರಿವು ಮಾಡಿಸಲು ಪ್ರಯತ್ನಿಸುವ ದಿನ ಇದು. ಬನ್ನಿ ನವೆಂಬರ್ 19, world toilet day ಆಚರಿಸೋಣ.