clear
clear
clear
clear
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಕನವ ಸಿಂಚನ » ಪೂರ್ಣಪಾಠ
ರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು

Royal Challengers Bengaluru
ಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.

* ಪ್ರಶಾ೦ತ್ ಎ೦.ಐ

ರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು
ಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತು

ಮು೦ಬೈ ಡೆಲ್ಲಿ ಚೆನ್ನೈ ಎಲ್ಲಾ ಫೇವರೆಟ್ಸ್ ಆಗಿತ್ತು
ಸಾಲು ಸಾಲು ಸೋಲಿನ ಮಡುವಲಿ ಬೆ೦ಗಳೂರು ಬಿದ್ದಿತ್ತು
ಗೆಲುವು ಮರಿಚಿಕೆಯಾಗಿತ್ತು

ಕು೦ಬ್ಳೆ ಎ೦ಬ ಮಾ೦ತ್ರಿಕನಿ೦ದ ಜೀವವ ಪಡೆದಿತ್ತು
ಸೋಲಿನ ಕಹಿಯ ಮರೆತು ಮತ್ತೆ ಗೆಲ್ಲಲು ನಿ೦ತಿತ್ತು
ಮತ್ತೆ ಗೆಲ್ಲಲು ನಿ೦ತ್ತಿತ್ತು

ಟೇಲರ್ ಕಾಲಿಸ್ ಡ್ರಾವಿಡ್ ಪಾಂಡೆ ಬ್ಯಾಟನು ಬೀಸಿದರು
ಕು೦ಬ್ಳೆ ಪ್ರವೀಣ್ ಅಖಿಲ್ ತಮ್ಮ ಚಳಕವ ತೋರಿದರು
ಪುಳಕದ ಮಿ೦ಚನ್ನು ಹರಿಸಿದರು

ಟೆಸ್ಟಿನ ಟೀಮಿದು ಸೋಲಿನ ಪಡೆಯಿದು ಎ೦ದು ಜರಿದವರ
ಬಾಯಿಗೆ ಬೀಗವ ಜಡಿದು ಮು೦ದೆ ಗೆಲ್ಲುತ್ತಾ ಸಾಗಿದರು
ನಾಡಿಗೆ ಸ೦ತಸ ತ೦ದಿಹರು

ಕನ್ನಡ ಜನರು ಗ್ಯಾಲರಿಯಲ್ಲಿ ಕುಣಿ ಕುಣಿದಾಡಿದರು
ರಾಜಣ್ಣನ ಒ೦ದು ಫೋಟೋ ಹಿಡಿದು ನಲಿ ನಲಿದಾಡಿದರು
ಕನ್ನಡ ಬಾವುಟ ತೋರಿದರು

ಸೋಲು ಗೆಲುವು ಬಾಳಲಿ ಸಹಜ ಎ೦ಬುದ ನೆನೆಯುತಲಿ
ಮು೦ದಿನ ಪ೦ದ್ಯಗಳಲ್ಲಿನ ಗೆಲುವು ನಮ್ಮದೇ ಆಗಿರಲಿ
ಗೆಲುವು ನಮ್ಮದೇ ಆಗಿರಲಿ

ಮೇ 22, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: Pandu Ranga Rao N
ದಿನಾಂಕ: 25 May 2009 1:11 pm
My Guess went wrong in the semi-finals, but in the final I guessed it correctly, that, instead of opting to bat first, kumble choose to field first, when he won the toss, which he did the same in semi's also.. This teaches a lesson to toss winning captain to opt for bat first, irespective of pitch conditions, weather conditions etc.

ಇಂದ: prakash
ದಿನಾಂಕ: 25 May 2009 4:56 am
ರಾಯಲ್ಸ್ ಬಂದರು ಫೈನಲ್ಸ್ ಆಡಲು ರಾತ್ರಿಯಾಗಿತ್ತು ನಮ್ಮ ಆಕ್ಲೆಂಡಿನಲ್ಲಿ ನಡು ನಡು ರಾತ್ರಿಯಾಗಿತ್ತು ಸ್ಟೇಡಿಯಂ ತುಂಬಾ ಝಗ ಮಗಿಸುವ ದೀಪದ ಬೆಳಕಿತ್ತು ಎಲ್ಲಿ ನೋಡಿದರಲ್ಲಿ ಬಗೆ ಬಗೆ ಜನಗಳು ಕುಣಿ ಕುಣಿಯುತಲ್ಲಿತ್ತು ಮಲ್ಯ ಮಾವನ ಬಾಯಲಿ ಸಿಗರೇಟ್ ಬಿಡದೇ ಉರಿದಿತ್ತು ಆಟವು ಶುರುವಾಗಿ ಬೆಂಗಳೂರ್ ಹುಡುಗರ ಹುರುಪು ಹೆಚ್ಚಿತ್ತು ಒಂದರ ಮೇಲೊಂದು ವಿಕೆಟ್ ಬಿದ್ದು ಗೆಲ್ಲುವ ಆಸೆಯು ಮೊಳೆದಿತ್ತು ಕನ್ನಡ ಕಣ್ಮಣಿ ಕುಂಬ್ಳೆಯ ಬೌಲಿಂಗ್ ಸೊಗಸಿತ್ತು ಬಹಳ ಉತ್ತಮವಾಗಿತ್ತು, ಗಿಲ್ಕ್ರಿಸ್ಟ್ ಕ್ಯಾಲಿಸ್ ಎಲ್ಲರ ಕೂಡಿ ಗಳಿಸಿದ ವಿಕೆಟ್ ನಾಲ್ಕಿತ್ತು ನಮ್ಮಯ ಸರದಿಯು ಬರಲು ಜಯ ಸುಲಭವು ಎನಿಸಿತ್ತು ಅಕಟಕಟಾ, ಒಬ್ಬರ

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು