clear
clear
clear
clear
ಮುಖಪುಟ » ಸಾಹಿತ್ಯ-ಸಂಸ್ಕೃತಿ » ಪುಸ್ತಕ ಪ್ರೀತಿ » ಪೂರ್ಣಪಾಠ
ಚಂದಿನ ಕವನ ಸಂಕಲನ ಮೇ 4ರಂದು ಬಿಡುಗಡೆ

Chandrashekar, ETV, Hyderabad
ಈಟಿವಿ ಕನ್ನಡ ವಾಹಿನಿಯ ಹೈದರಾಬಾದ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್ (ಚಂದಿನ) ಅವರ ಚೊಚ್ಚಲ ಕವನ ಸಂಕಲನ 'ಮುಸ್ಸಂಜೆಯ ಮುಖಾಮುಖಿ' ಮೇ 4ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಕವನ ಸಂಕಲನವನ್ನು ಅಕ್ಕ ಪ್ರಕಾಶನ ಹೊರತಂದಿದೆ.

ಖ್ಯಾತ ಸಾಹಿತಿ ಹಾಗು ನಾಟಕಕಾರರಾದ ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಚಿಂತಕರು ಹಾಗು ಚಲನಚಿತ್ರ ನಿರ್ದೇಶಕರಾದ ಪ್ರೊ. ಬರಗೂರು ರಾಮಚಂದ್ರಪ್ಪ, ವಿಶೇಷ ಅತಿಥಿಗಳಾಗಿ ಹೆಸರಾಂತ ವಿಮರ್ಶಕರು ಹಾಗು ಲೇಖಕ ಡಾ. ನಟರಾಜ್ ಹುಳಿಯಾರ್ ಬರಲಿದ್ದಾರೆ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಅವರು ವಹಿಸಿಕೊಳ್ಳಲಿದ್ದಾರೆ.

ಕಾರ್ಯಕ್ರಮದ ವಿವರ

ಬಿಡುಗಡೆಯಾಗುತ್ತಿರುವ ಪುಸ್ತಕ :
ಮುಸ್ಸಂಜೆಯ ಮುಖಾಮುಖಿ
ದಿನಾಂಕ : ಸೋಮವಾರ ಮೇ 04, 2009
ಸಮಯ : ಸಂಜೆ 5.30ರಿಂದ 7.30
ಸ್ಥಳ : ಯವನಿಕಾ, 2ನೇ ಮಹಡಿ, ಕಾನ್ಪರೆನ್ಸ್ ಹಾಲ್, ನೃಪತುಂಗ ರಸ್ತೆ, ಬೆಂಗಳೂರು.

(ದಟ್ಸ್ ಕನ್ನಡ ವಾರ್ತೆ)

ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಚಂದಿನ ಕವನಗಳು
ಹಿಡಿದಿಟ್ಟ
ಮತ್ತೆ ಬರುವನು ಚಂದಿರ

ಏಪ್ರಿಲ್ 30, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]


ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.

  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು