ನಿಮ್ಮ ರಾಶಿಯಲ್ಲಿ ಯಾವ ಗ್ರಹಗಳು ಅಲೆಯುತ್ತಿವೆ?ಗ್ರಹಗಳು ರಾಶಿಯಲ್ಲಿ ಅಲೆಯುತ್ತಿರುತ್ತವೆ. ಈ ಅಲೆದಾಟಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಭ್ರಮಣೆ ಎನ್ನುತ್ತಾರೆ. ಗ್ರಹ ಉಚ್ಚರಾಶಿಗೆ ಬಂದಾಗ ಬಲವೃದ್ದಿ, ನೀಚರಾಶಿಗೆ ಬಂದಾಗ ಬಲಹೀನತೆ ಉಂಟಾಗುತ್ತದೆ. ಅಂದಹಾಗೆ, ನಿಮ್ಮ ರಾಶಿ ಯಾವುದು? ನಿಮ್ಮ ರಾಶಿ ಬಲಾಬಲ ಯಾವ ಮಟ್ಟದಲ್ಲಿದೆ? ಪ್ರಸಿದ್ಧ ಜ್ಯೋತಿಷಿಗಳಿಂದ SWOT analysis [ಶಕ್ತಿ, ದೌರ್ಬಲ್ಯ, ಅವಕಾಶ, ಬೆದರಿಕೆ ವಿಶ್ಲೇಷಣೆ] ಓದಿರಿ.* ಆರ್. ಸೀತಾರಾಮಯ್ಯ, ಜೋತಿಷ್ಕರು, ಶಿವಮೊಗ್ಗಗ್ರಹಗಳಿಗೂ ಪರಿಭ್ರಮಣೆ
ನಾಸ್ಟ್ರಡಾಮಸ್ ಭವಿಷ್ಯ : ಸರ್ವನಾಶದ ಭಯ ಬೇಡಜ್ಯೋತಿಷ್ಯದಲ್ಲಿ ಎಲ್ಲವನ್ನೂ ಮುಂಚಿತವಾಗಿ ಹೇಳಬಹುದು ಎಂಬ ಮಾತು ಶುದ್ಧ ಸುಳ್ಳು. ಅಂತೆಯೇ ಕಾರಣಿಕನುಡಿ, ಭವಿಷ್ಯನುಡಿ ಮೊದಲಾವು ಕೂಡ. ವೈಜ್ಞಾನಿಕ ದೃಷ್ಟಿ, ವಿಚಾರಶೀಲ, ಸಾಮಾನ್ಯಜ್ಞಾನ ಮತ್ತು ತಕ್ಕಮಟ್ಟಿನ ವಿಜ್ಞಾನದರಿವು ನಮಗಿದ್ದರೆ ಜ್ಯೋತಿಷ-ಭವಿಷ್ಯನುಡಿಗಳು ನಮ್ಮನ್ನು ಅಧೀರರನ್ನಾಗಿಸವು.* ಎಚ್. ಆನಂದರಾಮ ಶಾಸ್ತ್ರೀ, ಬೆಂಗಳೂರು 2009ರಿಂದ 2012ರವರೆಗಿನ ಅವಧಿಯಲ್ಲಿ ಪ್ರಳಯಾಂತಕಾರಿ ಘಟನೆಗಳು ನಡೆದು 2012ರ ಡಿಸೆಂಬರ್ ವೇಳೆಗೆ ಜಗತ್ತು ಸರ್ವನಾಶ ಹೊಂದುವುದಾಗಿ 'ಕಾಲಜ್ಞಾನಿ'..
ಓ ಅರಗಿಣಿ ಸವಿ ಮಾತೊಂದ ನುಡಿವೆಯಾಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ. ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ- ನೋವನ್ನುಂಡ ಜೀವವ ಕಂಡು -ನೀ ಹಿಂಗ ನೋಡಬ್ಯಾಡ ನನ್ನ...* ವಾಣಿ ರಾಮದಾಸ್, ಸಿಂಗಪುರಇಂದು ಸಂಜೆ ಆಫೀಸಿನಿಂದ ಹೊರಟಾಗ ಮೋಡ..
ವಚನ, ಕವನ, ಚಿತ್ರಗೀತೆ, ಗಾದೆಗಳಲಿ ಗಿಣಿವರ್ಣನೆವಚನಗಳಲಿ ಗಿಣಿ :ಆಡದೇ ನವಿಲು, ಹಾಡದೇ ತಂತಿ, ಓದದೇ ಗಿಳಿ, ಭಕ್ತಿ ಇಲ್ಲದವರನ್ನು ಒಲ್ಲ ಕೂಡಲಸಂಗಮದೇವ! ಎಂದರು ಬಸವಣ್ಣನವರು. ಗಗನದ ಮೇಲೊಂದಭಿನವ ಗಿಳಿ ಹುಟ್ಟಿ, ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು! ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು! ಬ್ರಹ್ಮನಾ ಗಿಳಿಗೆ ಹಂಜರವಾದ! ವಿಷ್ಣುವಾ ಗಿಳಿಗೆ ಕೊರೆಕೂಳಾದ! ರುದ್ರನಾ ಗಿಳಿಗೆ ತಾ ಕೋಲಾದ! ಇಂತೀ ಮೂವರ ಮುಂದಣ ಕಂದನ ನುಂಗಿ..
'ಚುಟುಕು ಬ್ರಹ್ಮ' ದೇಸಾಯಿಗೆ ನುಡಿ ನಮನ'ಚುಟುಕು' ಎಂದಾಕ್ಷಣ ನಮಗೆ ನೆನಪಿಗೆ ಬರುವವರು ಕವಿ ದಿನಕರ ದೇಸಾಯಿ. ಉತ್ತರ ಕನ್ನಡದ ಹೆಸರಾಂತ ಕವಿ, ಚುಟುಕು ಸಾರ್ವಭೌಮ, 'ಅಭಿನವ ಸರ್ವಜ್ಞ', 'ಚೌಪದಿಯ ಜನಕ' - ಹೀಗೆ ಹಲವಾರು ಹೆಸರನಿತ್ತು ಅಭಿಮಾನಿಗಳು ಕರೆದಿದ್ದಾರೆ. ಈ ವರ್ಷ ಅವರ ಜನ್ಮಶತಮಾನೋತ್ಸವವನ್ನು ಆಚರಿಸಲಾಗುತ್ತದೆ. ಅವರದೇ ಹುಟ್ಟಿದ ದಿನ ಸೆಪ್ಟೆಂಬರ್ 10ರಂದು ಚುಟುಕ ಬ್ರಹ್ಮನಿಗೆ ಚುಟುಕುಗಳ ಮುಖಾಂತರ ನಮನ.* ಸುಧಾ ಎಂ.,..
ಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶನೀವು ’ಯಕ್ಷಗಾನ’ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ. ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ..
ಮಹಿಳೆಯರಿ೦ದ ಯಶಸ್ವೀ ತಾಳಮದ್ದಲೆ ಸಪ್ತಾಹ(ಮುಂದುವರಿದಿದೆ...)ತಾಳಮದ್ದಳೆ(ಲೆ)ಯಲ್ಲಿ ಮುಮ್ಮೇಳದ ಪಾತ್ರಗಳು ’ವೇಷ-ಭೂಷಣ’ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ 2-3 ಗಂಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ..
ಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳುಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ,..
ಪುನರ್ವಸು ಪುಷ್ಯ ನಕ್ಷತ್ರಕ್ಕೆ ಗ್ರಹಣದ ಬಿಸಿನನ್ನ ಪ್ರೀತಿಯ ಸ್ನೇಹಿತರೆ ಮತ್ತು ಸಮಾನ ಮನಸ್ಕ ಬಂಧುಗಳೆ,ಬುಧವಾರ ಜುಲೈ 22ರಂದು ಸಂಭವಿಸಲಿರುವ ಪೂರ್ಣ ಸೂರ್ಯಗ್ರಹಣದ ಬಗೆಗೆ ನಿಮ್ಮೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಬಯಸುತ್ತೇನೆ. ನಾಳೆ ನಸುಕಿನ 5.31 ಗಂಟೆಗೆ ಗ್ರಹಣ ಆರಂಭ. ಆದರೆ ಗ್ರಹಣ ನೋಡಲು ನಾವು, ಭಾರತದಲ್ಲಿರುವವರು ಇನ್ನೂ ಒಂದು ಗಂಟೆ ಹೆಚ್ಚಿಗೆ ಕಾಯಬೇಕು. ಏಕೆಂದರೆ, ಸೂರ್ಯೋದಯ ಭಾರತೀಯ ಕಾಲಮಾನ 6.25ಕ್ಕೆ. ಮಹತ್ವದ ಸಂಗತಿಯೆಂದರೆ ಪುನರ್ವಸು..
ತಿರುಕ್ಕುರಲ್ ಕರ್ತೃ ಕವಿ ತಿರುವಳ್ಳುವರ್ ಕಿರುಪರಿಚಯತಿರುವಳ್ಳುವರ್ ತಮಿಳುನಾಡಿನ ಮಹಾನ್ ಕವಿ. ಮಧುರೆ ಜಿಲ್ಲೆಯ ಕಾವೇರಿ ತೀರದ ಪೂ೦ಪುಹಾರ್ ಹಳ್ಳಿಯಲ್ಲಿ ಹುಟ್ಟಿದರೆ೦ದು ಕೆಲವರ ಅಭಿಪ್ರಾಯ. ಮತ್ತೆ ಕೆಲವರು ಚೆನ್ನೈನಲ್ಲಿರುವ ಮೈಲಾಪುರ್ ಸ್ಥಳದವರೆನ್ನುತ್ತಾರೆ. ತಿರುವಳ್ಳುವರ್ ಅವರು 133 ಅಧ್ಯಾಯದ ತಿರುಕ್ಕುರಳ್ ಎ೦ಬ ಮಹಾ ಗ್ರ೦ಥ ರಚಿಸಿದ ಕವಿ. ಈತನ ಕಾಲ ನಿಗದಿಯಾಗಿಲ್ಲವಾದರೂ ಕ್ರಿಸ್ತಪೂರ್ವ 2ರಿಂದ ಹಿಡಿದು ಕ್ರಿಸ್ತಶಕ 8ವರೆಗೆ ಇರಬಹುದು ಎ೦ದು ಹೇಳಲಾಗಿದೆ. ಇವರ ಹೆಸರಿನಲ್ಲಿ..