clear
clear
clear
clear
ಮುಖಪುಟ » ಲೈಫು-ಸ್ಟೈಲು » ಕಾಮಸೂತ್ರ » ಪೂರ್ಣಪಾಠ
ಮೊದಲ ರಾತ್ರಿ
* ಕೆಆರ್ ರವೀಂದ್ರ, ಬೆಂಗಳೂರು

Poetic experience of honeymoon couple
ಮೊದಲರಾತ್ರಿಯ ಮಧುರಯಾತನೆ ಮನಸ್ಸುಗಳು ಮಧುರಮೀಲನಕೆ
ಶ್ರೀಕಾರವಾಡಲಿ|
ಸ್ಪರ್ಶದಲಿ ಮೃದುತನವಿರಲಿ, ಚುಂಬನದೀ ಅಧರ ಅಮೃತ ಸವಿಯಲಿ|
ಅವಳ ಕಿರುಗೆಜ್ಜೆಯ ಸದ್ದು ಹೃದಯವ ಮೀಟಲಿ, ಬೆರಳಿಗಿಟ್ಟ ಮುತ್ತು ಆ ಕೆಂದಾವರೆ
ಮೊಗದಲಿ ಲಜ್ಜೆಯ ನಾಟ್ಯವಾಡಿಸಲಿ|

ಆ ಗುಲಾಬಿಯ ಕೆನ್ನೆ ಸೋಕಲು ಮನ್ಮಥನ ಬಾಣ ತಾಕಿದ
ರತಿಯಂತೆ ಅವಳಂದವೆಲ್ಲಾ ಆ ಕ್ಷಣ ಗರಿಬಿಚ್ಚಲಿ|
ಮೂಗಿನ ಬೊಟ್ಟು ಮನಸ್ಸನು ಸೂಜಿಗಲ್ಲಿನಂತೆ ಸೆಳೆಯಲಿ, ಕಣ್ಣಿಗೆ ತೀಡಿದ ಕಾಡಿಗೆ
ಕಾಮವನ್ನು ಪ್ರಚೋದಿಸಲಿ|

ಹಣೆಗಿಟ್ಟ ಕುಂಕುಮ ಅನುರಾಗದ ದೀಪವಾಗಲಿ, ಆ ಕ್ಷಣ ಜಾರುವ ಅವಳ ಸೀರೆ
ಜನ್ಮಗಳ ಬಂಧನಕೆ ಸಾಕ್ಷಿಯಾಗಲಿ|
ಸರಸ ಸವಿಯೂಟವಾಗಲಿ-ವಿರಸ ವಿನೋದವಾಗಲಿ
ಹಾಲು-ಹಣ್ಣು-ಹಂಪಲ ಸಮಯಸಮಯಕೆ ದೇಹಲಾಸ್ಯವ ನೀಗಿಸಲಿ|

ಸರಸವಿರಲಿ, ಕ್ಷಣಕಾಲ ಅಲ್ಲಿ ವಿರಸ ಕೂಡ ಮೂಡಲಿ
ಮುದಡಿದ ತಾವರೆ ಮುತ್ತಿಡಲು ಮತ್ತೆ ಅರಳಿ ನಲಿಯಲಿ|
ನಗುವಿರಲಿ, ನಲಿವಿರಲಿ ಮಧುಚಂದ್ರದ ಆ ರಸಗಳಿಗೆ ಮನಸಿನಲಿ
ಯಾವ ಶಂಕೆ ಮೂಡಿಸದಿರಲಿ|

ಆಸೆಯಿರಲಿ, ಅನುರಾಗವಿರಲಿ ಮಧುರಮಿಲನದ ರಸಕ್ಷಣವದು ರಾಗ-ದ್ವೇಷ ರಹಿತ
ನಾಳೆಯ ಬಾಳಿಗೆ ನಾಂದಿಯಾಡಲಿ|

ನವೆಂಬರ್ 6, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಅಶೋಕ್
ದಿನಾಂಕ: 10 Nov 2009 11:47 am
ಅಭಿನಂದನೆಗಳು ರವಿಂದ್ರ ನಿಮ್ಮ ಈ ಸುಂದರ ಕವಿತೆ ಇಂದ ನಿಮ್ಮ ಅಭಿಮಾನಿ ಆದೇ...

ಇಂದ: ರಮೇಶ್ ಹಿರೇಜಂಬೂರು
ದಿನಾಂಕ: 09 Nov 2009 9:24 pm
ತುಂಬಾ ಚನ್ನಾದಿದೆ...ಕವಿತೆ... ಸಾಹಿತ್ಯ ಎಲ್ಲಾದರು ಸರಿ ಉದಯಿಸಬಹುದು ಎಂಬುದ್ದಕ್ಕೆ ಇದೆ ಸಾಕ್ಷಿ...

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು