ಆಯುಧ ಪೂಜೆ ಆಚರಣೆ, ಮಹತ್ವಆಶ್ವೀಜ ಶುದ್ಧ ಪ್ರತಿಪದೆಯಿಂದ ದಶಮಿಯವರೆಗೆ ಭಾರತದಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲಾಗುವ ನವರಾತ್ರಿ ಮತ್ತು ವಿಜಯದಶಮಿ ಹಬ್ಬ ಹಿಂದೂಗಳಲ್ಲಿ ಕ್ರಿಯಾತ್ಮಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿ ಭಾರೀ ಮಹತ್ವ ಪಡೆದಿದೆ. ಈ ಹತ್ತು ದಿನಗಳ ಸಂಭ್ರದ ದಸರಾ ಹಬ್ಬದ ದಿನಗಳಂದು ಬನಶಂಕರಿ, ಚಾಮುಂಡೇಶ್ವರಿ, ದುರ್ಗೆ, ಸರಸ್ವತಿ ಮುಂತಾದ ತಮ್ಮ ಇಷ್ಟದೇವತೆಗಳನ್ನು ಭಕ್ತಾದಿಗಳು ಭಕ್ತಿಭಾವದಿಂದ ಪೂಜಿಸುತ್ತಾರೆ.ಒಂಬತ್ತು ದಿನಗಳಂದು ಒಂಬತ್ತು ವಿವಿಧ ದೇವದೇವತೆಗಳ್ನು ಸ್ತುತಿಸಲಾಗುತ್ತದೆ. ನವರಾತ್ರಿಯ
ದಸರಾ: ಜನಮನ ಗೆದ್ದ ಜನಪದೋತ್ಸವಮೈಸೂರು, ಸೆ. 23:ನಗರದ ಹೃದಯ ಭಾಗದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಬಗೆಬಗೆಯ ವೇಷಭೂಷಣಗಳೊಂದಿಗೆ ಆರುನೂರಕ್ಕೂ ಹೆಚ್ಚು ಕಲಾವಿದರು ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತಹ ಕಲಾ ಚಟುವಟಿಕೆಗಳನ್ನು ಪ್ರದರ್ಶಿಸಿ ಜನರನ್ನು ತನ್ನ ಕಡೆ ಆಕರ್ಷಿಸುವಂತೆ ಮಾಡಿತ್ತು.ಸಾಂಸ್ಕೃತಿಕ ನಗರಿ ಮೈಸೂರಿನ ಗತವೈಭವದ ಸಂಸ್ಕೃತಿಯನ್ನು ಸಾರುವ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ, ಯಕ್ಷಗಾನ, ಭಜನೆ, ರಾಮನಾಮ,..
ದಸರಾ: ಲೋಹದ ಹಕ್ಕಿಗಳ ಅದ್ಭುತ ಹಾರಾಟಮೈಸೂರು, ಸೆ. 22: ಬಾನಂಗಳದಲ್ಲಿ ಹಾರಾಡುವ ಲೋಹದ ಹಕ್ಕಿಗಳಿಂದ ರೋಮಾಂಚನಗೊಳಿಸುವ ಮೈನವಿರೇಳಿಸುವ ವೈವಿಧ್ಯಮಯ ವೈಮಾನಿಕ ಪ್ರದರ್ಶನವನ್ನು ಸೆಪ್ಟಂಬರ್ 22 ಮತ್ತು 24ರಂದು ಬನ್ನಿಮಂಟಪದಲ್ಲಿ ಆಯೋಜಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ವೈಮಾನಿಕ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನದ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯ ಸೈನಿಕರು ತಮ್ಮ ಕುಶಲ ಕಲೆಯನ್ನು ಪ್ರದರ್ಶಿಸಿದರು. ಸೂಪರ್ ಜೆಟ್ ಸೂರ್ಯ..
ದಸರಾ:ಗ್ರಾಮೀಣ ಜನತೆ ಪ್ರತಿಭಾ ಅನಾವರಣಮೈಸೂರು, ಸೆ, 22:ಸರ್ಕಾರ ದಸರಾ ಹಬ್ಬವನ್ನು "ನಾಡಹಬ್ಬ" ವೆಂದು ಘೋಷಿಸಿದ್ದು, ಗ್ರಾಮೀಣ ಭಾಗದ ಜನರು ಕೂಡಾ ಈ ಹಬ್ಬದಲ್ಲಿ ಭಾಗವಹಿಸಿ, ಗ್ರಾಮೀಣ ಭಾಗದ ಸೊಗಡನ್ನು ಕಲೆ ಮೂಲಕ ಪ್ರದರ್ಶಿಸಲು ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.ಅವರು ಇಂದು ನಂಜನಗೂಡು ತಾಲ್ಲೂಕಿನಲ್ಲಿ ನಡೆದ "ಗ್ರಾಮೀಣ ದಸರಾ"..
ದೊಡ್ಡ ಪರದೆಯ ಮೇಲೆ ದಸರಾ ಕಾರ್ಯಕ್ರಮಗಳುಮೈಸೂರು, ಸೆ, 22: ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಕಾರ್ಯಕ್ರಮಗಳನ್ನು ದೊಡ್ಡ ಪರದೆಯ ಮೇಲೆ ಪ್ರೊಜೆಕ್ಟರ್ ಮುಖಾಂತರ ನಗರದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲು ಮತ್ತು ಮೈಸೂರಿನ ಎಲ್ಲಾ ನಾಗರೀಕರು ಟಿವಿಗಳಲ್ಲಿ ಕೇಬಲ್ ನೆಟ್‌ವರ್ಕ್ ಮುಖಾಂತರ ವೀಕ್ಷಿಸಲು ದಸರಾ ಸಮಿತಿಯಿಂದ ಅನುವು ಮಾಡಿಕೊಡಲಾಗಿದೆ. ದೊಡ್ಡ ಪರದೆಯ ಮೇಲೆ ಕಾರ್ಯಕ್ರಮಗಳನ್ನು ಬಿತ್ತರಿಸುವುದರಿಂದ ಆಯಾ ಮೊಹಲ್ಲಗಳಲ್ಲಿಯೇ..
ರಮ್ಯಾರಿಂದ ಯುವ ದಸರಾಕ್ಕೆ ಚಾಲನೆಮೈಸೂರು, ಸೆ. 20: ಐದು ದಿನಗಳ ಕಾಲ ನಡೆಯುವ ಯುವ ದಸರಾ ಕಾರ್ಯಕ್ರಮವನ್ನು ಇಂದು ಸಂಜೆ ನಟಿ ರಮ್ಯ ಉದ್ಘಾಟಿಸಲಿದ್ದಾರೆ ಎಂದು ಯುವದಸರಾ ಉಪ ಸಮಿತಿ ಮುಖ್ಯಸ್ಥೆ ಯಶಸ್ವಿನಿ ಸೋಮಶೇಖರ್ ಹೇಳಿದರು. ಬಾಲಿವುಡ್ ನಲ್ಲಿ ಬಿಸಿಯಾಗಿರುವ ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆ ಅವರು ಯುವ ದಸರಾಕ್ಕೆ ಚಾಲನೆ ನೀಡುವರೆಂದು ಈ ಮುಂಚೆ ಪ್ರಕಟಿಸಲಾಗಿತ್ತು. ಆದರೆ , ಅವರು..
ಮೂಢನಂಬಿಕೆ ದೂರಾಗಿಸೋ ಚಿತ್ರ ಬರಲಿ: ಕಟ್ಟಾಮೈಸೂರು, ಸೆ. 20: ಸಮಾಜದಲ್ಲಿ ಇರುವ ಅಜ್ಞಾನ, ಮೂಡನಂಬಿಕೆ ಹೋಗಲಾಡಿಸುವಂತಹ, ಯುವಜನತೆಗೆ ಪ್ರೋತ್ಸಾಹ ನೀಡುವ, ಜನತೆಗೆ ಮನೋರಂಜನೆ, ಸಂತೋಷ ಹಾಗೂ ಮನಸ್ಸಿಗೆ ಮುದ ನೀಡುವ ಚಲನಚಿತ್ರಗಳು ನಿರ್ಮಾಣವಾಗುವ ಅವಶ್ಯಕತೆ ಇದೆ ಎಂದು ಅಬಕಾರಿ, ವಾರ್ತಾ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವಕಟ್ಟಾ ಸುಬ್ರಮಣ್ಯ ನಾಯ್ಡು ಅವರು ತಿಳಿಸಿದರು.ಅವರು ಶನಿವಾರ ನಗರದ ಕಲಾಮಮದಿರದಲ್ಲಿ ನಡೆದ 'ದಸರಾ ಚಲನಚಿತ್ರೋತ್ಸವ' ಉದ್ಘಾಟನೆ..
ಹಳ್ಳಿಹಳ್ಳಿಗೆ ದಸರಾ ವಿಸ್ತರಿಸಲಿ: ರವಿಶಂಕರ್ಮೈಸೂರು, ಸೆ.19: ವಿಶ್ವವಿಖ್ಯಾತ ಅದ್ದೂರಿ ದಸರಾ ಮಹೋತ್ಸವಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಅವರು ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸುವ ಮೂಲಕ ಇಂದು ಚಾಮುಂಡಿ ಬೆಟ್ಟದಲ್ಲಿ ಚಾಲನೆ ನೀಡಿದರು. ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರ ಗ್ರಾಮೀಣ ದಸರಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ದಸರಾ ಹಳ್ಳಿಹಳ್ಳಿಗೆ ವಿಸ್ತರಿಸಲಿ:..
ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರ ಸಜ್ಜುಮೈಸೂರು, ಸೆ.19: ನಾಡಹಬ್ಬಕ್ಕೆ ಸಾಂಸ್ಕೃತಿಕ ನಗರ ಮೈಸೂರು ಸಜ್ಜಾಗಿದೆ. ಶನಿವಾರ(ಸೆ.19) ಬೆಳಗ್ಗೆ 10.38ರಿಂದ 11.5ರ ಶುಭ ವೃಶ್ಚಿಕ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸುವುದರೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಚಾಲನೆ ನೀಡುವರು.ಚಾಮುಂಡಿ ಬೆಟ್ಟದಲ್ಲಿ ದಸರಾ ಕಾರ್ಯಕ್ರಮಗಳು ಆರಂಭವಾಗುತ್ತಿದ್ದಂತೆ ಇತ್ತ..
ಸೆ.20 ರಿಂದ ದಸರಾ ಸೈಕ್ಲಿಂಗ್ ಸ್ಪರ್ಧೆಬೆಂಗಳೂರು, ಸೆ. 18 : ನಾಡಹಬ್ಬ ದಸರಾ ಪ್ರಯುಕ್ತ ಸೈಕ್ಲಿಂಗ್ ಉಪ ಸಮಿತಿ ವತಿಯಿಂದ ಸೈಕಲ್ ಸ್ಪರ್ಧೆ ಮತ್ತು ರೇಸ್‌ಗಳನ್ನು ಸೆ. 20 ರಿಂದ 22 ರವರೆಗೆ ಏರ್ಪಡಿಸಲಾಗಿದೆ.ಸೆ. 20 ರಂದು ಬೆಳಗ್ಗೆ 9 ಗಂಟೆಗೆ ದಸರಾ ಹೆರಿಟೇಜ್ ಸೈಕಲ್ ಸ್ಪರ್ಧೆಯನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆ ಮಾಡುವರು. ಇದರಲ್ಲಿ..