clear
clear
ಮುಖಪುಟ » ಅಂಕಣಗಳು » ವಿಚಿತ್ರಾನ್ನ
ಶ್ರೀವತ್ಸ ಜೋಶಿ ಲೇಖನಗಳನ್ನು ಓದಿರಿ

ಹಪ್ಪಳವೆಂದರೆ ಹಲಸಿನ ಹಪ್ಪಳವಯ್ಯಾ...!
ಮಧ್ಯಾಹ್ನ ಸೂರ್ಯ ನೆತ್ತಿಯ ಮೇಲಕ್ಕೆ ಬರುವ ಹೊತ್ತಿಗೆ ಹಪ್ಪಳಗಳೆಲ್ಲ ಅರೆಬರೆಯಾಗಿ ಒಣಗಿರುತ್ತವೆ. ಈ ಹಂತದಲ್ಲಿ ಕೆಲವೊಂದಿಷ್ಟನ್ನು ಒಳತಂದು ಬಾಳೆಲೆಯಿಂದ ಪ್ರತ್ಯೇಕಿಸಿ ಒಂಚೂರು ತೆಂಗಿನೆಣ್ಣೆ ಹಚ್ಚಿ ತಿನ್ನುವುದು (ಜಾಸ್ತಿ ತಿನ್ನಬೇಡ್ರೋ ಹೊಟ್ಟೆನೋವು ಬರುತ್ತೆ ಎಂಬ ಹಿರಿಯರ ದಬಾಯಿಸುವಿಕೆಯ ನಡುವೆಯೂ) ಬಲು ಮಜಾ! ಸುಮಾರು ಒಂದೂವರೆ ಎರಡು ಗಂಟೆಗಳಾಗುವಾಗ ಎಲ್ಲ ಹಪ್ಪಳಗಳೂ ಚೆನ್ನಾಗಿ ಒಣಗಿರುತ್ತವೆ. ಆಗಲೇ ಅವನ್ನು ಬಾಳೆಲೆಯಿಂದ ಪ್ರತ್ಯೇಕಿಸಿ..

ಹಪ್ಪಳವೆಂದರೆ ಹಲಸಿನ ಹಪ್ಪಳವಯ್ಯಾ...!
ಸ್ವಚ್ಛಗೊಳಿಸಿದ ತೊಳೆಗಳನ್ನು ದೊಡ್ಡ ಹಂಡೆಯಲ್ಲಿ ಕುದಿಯುತ್ತಿರುವ ನೀರಿಗೆ ಹಾಕಿ ಸ್ವಲ್ಪ ಉಪ್ಪನ್ನೂ ಸೇರಿಸಿ ಚೆನ್ನಾಗಿ ಬೇಯಿಸುವುದು, ಬೆಂದ ನಂತರ ನೀರನ್ನು ಬಸಿದು ತೊಳೆಗಳನ್ನಷ್ಟೇ ಇನ್ನೊಂದು ದೊಡ್ಡಪಾತ್ರೆಗೆ ವರ್ಗಾಯಿಸಿ ಅಚ್ಚಖಾರದ ಪುಡಿ ಸೇರಿಸಿ ಕಲಸುವುದು ಮತ್ತು ಬಿಸಿಬಿಸಿಯಾಗಿರುವಾಗಲೇ ಕಡೆಯುವಕಲ್ಲಿನಲ್ಲಿ ರುಬ್ಬಿ ಹಿಟ್ಟುಮಾಡುವುದು - ಇವೆಲ್ಲ ನಮ್ಮ ತಾಯಿಯವರ ಡಿಪಾರ್ಟ್‌ಮೆಂಟ್‌. ರುಬ್ಬಿದ ಹಿಟ್ಟನ್ನು ಒಂದು ದೊಡ್ಡಪಾತ್ರೆಯಲ್ಲಿಟ್ಟರೆ ನಾಳೆಬೆಳಿಗ್ಗೆಗೆ ಅದು ಚೆನ್ನಾಗಿ..

ಹಪ್ಪಳವೆಂದರೆ ಹಲಸಿನ ಹಪ್ಪಳವಯ್ಯಾ...!
ಗರಿಗರಿ ಹಪ್ಪಳವಿದ್ದರೆ, ಊಟ ಎಷ್ಟೇ ಕೆಟ್ಟದಾಗಿದ್ದರ ನಿಬಾಯಿಸಬಹುದು! ಇನ್ನೂ ಹಲಸಿನ ಹಪ್ಪಳ ಸಿಕ್ಕಿದರೇ, ಕೇಳಬೇಕೇ? ಅದರ ಕತೆಯೇ ಬೇರೆ! ವಿಚಿತ್ರಾನ್ನ 238ನೇ ಸಂಚಿಕೆ ಓದುವಾಗ, ನಿಮ್ಮ ಬಾಯಲ್ಲಿ ನೀರು ಬಂದ್ರೆ ನಾವು ಜವಾಬ್ದಾರರಲ್ಲ..!ಶ್ರೀವತ್ಸ ಜೋಶಿ‘‘ದಾಸರೆಂದರೆ ಪುರಂದರ ದಾಸರಯ್ಯಾ...’’ - ಪುರಂದರದಾಸರ ಬಗ್ಗೆ ಹೀಗೆಂದವರು ಅವರಿಗಿಂತ ವಯಸ್ಸಲ್ಲಿ ಕಿರಿಯರಾದ ವಿಜಯದಾಸರು. ನಿಸ್ಸಂಶಯವಾಗಿಯೂ ಶ್ರೇಷ್ಠರಾದ (ಶ್ರೇಷ್ಠಿ ತದ್ಭವ ‘ಸೆಟ್ಟಿ’) ಪುರಂದರರಿಗೆ..

ಪ್ರಪಂಚದ ಪ್ರತಿಯಾಬ್ಬರೂ ಪರಸ್ಪರ ಪರಿಚಿತರೇ!
ಇದರಿಂದ ಷಟ್ಪದ ಸಾಮೀಪ್ಯ ಸಿದ್ಧಾಂತದಲ್ಲಿ ತಿರುಳಿದೆ ಎಂದು ಸಾಬೀತಾಯಿತು. ಸ್ಟಾನ್ಲೆಯ ಪ್ರಯೋಗ-ಫಲಿತಾಂಶ ವಿವರಗಳು ‘ಸೈಕಾಲಜಿ ಟುಡೇ’ ಮ್ಯಾಗಜೀನ್‌ನಲ್ಲಿ ಪ್ರಕಟವಾದುವು; Six degrees of separation ಎಂಬ ಪದಪುಂಜವು ಮಾಧ್ಯಮಗಳಲ್ಲೂ ಹೆಚ್ಚುಹೆಚ್ಚಾಗಿ ಉಲ್ಲೇಖಿಸಲ್ಪಟ್ಟಿತು. 1990ರಲ್ಲಿ ಅದೇ ಹೆಸರಿನ ಒಂದು ನಾಟಕ, ಆಮೇಲೊಂದು ಸಿನೆಮಾ ಸಹ ಬಂತು! ಇದೇ ಸಿದ್ಧಾಂತವನ್ನಾಧರಿಸಿ ಹಾಲಿವುಡ್‌ ಚಿತ್ರಗಳಲ್ಲಿ (ಇದುವರೆಗೆ ಬಿಡುಗಡೆಯಾದ ಎಲ್ಲ ಚಿತ್ರಗಳ ಮಾಹಿತಿರಾಶಿಯಿಂದ)..

ಪ್ರಪಂಚದ ಪ್ರತಿಯಾಬ್ಬರೂ ಪರಸ್ಪರ ಪರಿಚಿತರೇ!
ಆರೇ ಆರು ಕೊಂಡಿಗಳಲ್ಲಿ ಪ್ರಪಂಚದ ಯಾವುದೇ ಇಬ್ಬರು ವ್ಯಕ್ತಿಗಳು ಪರಸ್ಪರ ಪರಿಚಿತರಾಗಿರುತ್ತಾರೆ ಎನ್ನುವ Six degrees of separation ಸಿದ್ಧಾಂತವನ್ನು ಪರಿಚಯಿಸುವುದೇ ವಿಚಿತ್ರಾನ್ನ-237ರ ಉದ್ದೇಶ.ಶ್ರೀವತ್ಸ ಜೋಶಿ‘‘ಅದ್ಹೇಗ್ರೀ ಪ್ರಪಂಚದಲ್ಲಿರೋರೆಲ್ಲ ಪರಿಚಿತರಾಗ್ತಾರೆ? ನಮಗೆ ನಮ್ಮ ಅಪಾರ್ಟ್‌ಮೆಂಟ್‌ ಕಾಂಪ್ಲೆಕ್ಸ್‌ನಲ್ಲೇ ಅಥವಾ ನಮ್ಮ ಬೀದಿಯಲ್ಲಿರುವ ಮನೆಗಳಲ್ಲೇ ಬಹಳಷ್ಟು ಮಂದಿಯ ಪರಿಚಯವಿಲ್ಲ!’’ ಎನ್ನುತ್ತೀರಿ ನಿಮ್ಮಪೈಕಿ ಗಿಜಿಗುಟ್ಟುವ ನಗರಗಳಲ್ಲಿ ಗೂಡುಕಟ್ಟಿಕೊಂಡಿರುವವರು. ಅದಕ್ಕಿಂತ ಗ್ರಾಮೀಣ ಪ್ರದೇಶದವರು ವಾಸಿ...

ವಿದ್ಯುದ್ದೀಪ ಸಂಶೋಧಕ ಥೊಮಸ್‌ ಎಡಿಸನ್‌ ಅಲ್ವಾ?
ವಿದ್ಯುತ್‌ ಬಲ್ಬ್‌ ಕಂಡು ಹಿಡಿದದ್ದು ಥೊಮಸ್‌ ಆಲ್ವಾ ಎಡಿಸನ್‌ ಎಂದು ಪ್ರೆೃಮರಿ ಶಾಲೆಯಲ್ಲಿ ಕಲಿತದ್ದು, ಈಗಲೂ ತಲೆಯಲ್ಲಿ ಉಳಿದಿದೆ. ಹೀಗಿರಬೇಕಾದರೇ, ಇದೇನಿದು ಹೊಸ ಅನುಮಾನ ಅನ್ನುವಿರಾ? ವಿಚಿತ್ರಾನ್ನ-236ನೇ ಸಂಚಿಕೆಯಲ್ಲಿ ಅನುಮಾನದ ಬೆನ್ನತ್ತಿದಾಗ...ಶ್ರೀವತ್ಸ ಜೋಶಿಸಂಶೋಧನೆ (discovery) ಬೇರೆ, ಆವಿಷ್ಕಾರ (invention) ಬೇರೆ. ಇವೆರಡರ ವ್ಯತ್ಯಾಸ ಅತಿಸ್ಪಷ್ಟವಾಗಿ ತಿಳಿಯಬೇಕಾದರೆ ಒಂದು ಜೋಕನ್ನು ಬಳಸಬಹುದು. ‘‘ಡಿಸ್ಕವರಿಗೂ ಇನ್ವೆನ್ಷನ್‌ಗೂ ಏನು ಡಿಫರೆನ್ಸ್‌?’’ ಎಂದು..

ವಿದ್ಯುದ್ದೀಪ ಸಂಶೋಧಕ ಥೊಮಸ್‌ ಎಡಿಸನ್‌ ಅಲ್ವಾ?
‘ಎಡಿಸನ್‌ ಏಂಡ್‌ ಸ್ವಾನ್‌ ಯುನೈಟೆಡ್‌ ಎಲೆಕ್ಟ್ರಿಕ್‌ ಕಂಪೆನಿ’ ಹುಟ್ಟಿಕೊಂಡಿತು. ಶಿಕ್ಷೆಗಾಗಿ, ಪಾಲುದಾರನಾಗಿ ಸೇರಿಕೊಂಡ ಎಡಿಸನ್‌ ಮುಂದೆ ಕ್ರಮೇಣ ಆ ಕಂಪೆನಿಯ ಸಂಪೂರ್ಣ ಮಾಲಿಕತ್ವವನ್ನು ತಾನೇ ವಹಿಸಿಕೊಂಡ. ಇವತ್ತು ‘ಜನರಲ್‌ ಎಲೆಕ್ಟ್ರಿಕ್‌’ (GE) ಎಂಬ ಹೆಸರಿನ ಬಹುಉತ್ಪನ್ನ ಬಹುರಾಷ್ಟ್ರೀಯ ದೈತ್ಯಕಂಪೆನಿಯಿದೆಯಲ್ಲ, ಅದೇ ಮೂಲತಃ ಸ್ವಾನ್‌-ಎಡಿಸನ್‌ ಪಾಲುದಾರಿಕೆಯ ಕಂಪೆನಿ!ಅಮೆರಿಕದಲ್ಲಿ ಎಡಿಸನ್‌ಗೆ ದುಡ್ಡು ದೌಲತ್ತು ಎಲ್ಲ ಸಿಕ್ಕಿತಾದರೂ ಎಲೆಕ್ಟ್ರಿಕ್‌ ಬಲ್ಬ್‌ನ ಪೇಟೆಂಟ್‌ಗಾಗಿ..

ಜೆಹರ್‌ ಕಾ ವಾದಾ... ಫಿಫ್ಟಿ ಫಿಫ್ಟಿ...
ವಿಚಿತ್ರಾನ್ನದಲ್ಲಿದ್ದ ವಿಷ ಸಮಸ್ಯೆಯನ್ನು ಬಿಡ್ಸಿದ್ದೇನೆ... ‘ ನೀರು ಕುಡಿ’ದಷ್ಟು ಸುಲಭವಾಗಿ!ನಂದಕಿಶೋರ್‌, ಮೈಸೂರು.ಸ್ವಾಮಿ,ವಿಚಿತ್ರಾನ್ನದಲ್ಲಿ ‘ಪಚನವಾಗುವಷ್ಟೇ...’ ಎಂದು ಪುಸಲಾಯಿಸಿ ಒಂದು ಡೋಸ್‌ ವಿಷ(ಯ) ಮತ್ತು ಅದಕ್ಕಿಂದ ಸ್ಟ್ರಾಂಗ್‌ ಡೋಸ್‌ ಜಾಣ್ಮೆಲೆಕ್ಕ ಕೊಟ್ಟಿದ್ರಲ್ಲ? ‘‘ಇದೊಳ್ಳೇ ತಲೆತಿನ್ನುವ ಪ್ರಶ್ನೆ ಆಯ್ತಲ್ಲ ಮಾರಾಯ್ರೆ. ಉತ್ತರ ಹೇಂಗೆ ತಲೆ ಕೆಳಗೆ ಮಾಡಿದ್ರೂ ಸಿಗ್ತಿಲ್ಲೆ!’’ ಅಂತ ಕುಂದಾಪುರ ಕಡೆಯ ನನ್ನ ಮಿತ್ರನೊಬ್ಬನ ಉವಾಚ. ನಾನೂ ಮಂಡೆ ಸರೀ..

ಕ್ಯಾರೆಟ್‌ ಕಾ ಕ್ಯಾ ರೇಟ್‌ ಹೈ?...
ಸರಿ, ‘ಎ’ ಜೀವಸತ್ವಕ್ಕೂ ಕಣ್ಣುಗಳ ಕ್ಷೇಮಾರೋಗ್ಯಕ್ಕೂ ಏನು ನಂಟು? ಯಕೃತ್ತಿನಲ್ಲಿ ಸಂಸ್ಕರಣೆಗೊಂಡ ಜೀವಸತ್ವವು ರಕ್ತದ ಮೂಲಕ ಅಕ್ಷಿಪಟಲ ಅಥವಾ ಕಣ್ಣುಗುಡ್ಡೆಯ ಹಿಂದಿನ ಪ್ರಕಾಶಗ್ರಾಹಿ ಪೊರೆಯತ್ತ ಪಯಣಿಸುತ್ತದೆ. ಅಲ್ಲಿ ಮತ್ತೆ ಅದು ‘ರೆಟಿನಲ್‌’ ಎಂಬ ರಾಸಾಯನಿಕವಾಗಿ ಪರಿವರ್ತಿತವಾಗುತ್ತದೆ. ಈ ರಾಸಾಯನಿಕದ ಮೇಲೆ ಬೆಳಕು ಬಿದ್ದಾಗ ಅದು ವಿದ್ಯುತ್‌ತರಂಗಗಳಾಗಿ ಮೆದುಳಿಗೆ ತಲುಪುತ್ತದೆ, ಆ ವಿದ್ಯುಚ್ಛಕ್ತಿಯ ನೆರವಿಂದ ಚಿತ್ತಭಿತ್ತಿಯಲ್ಲಿ ನಾವು ‘ನೋಡಿದ’..

ಕ್ಯಾರೆಟ್‌ ಕಾ ಕ್ಯಾ ರೇಟ್‌ ಹೈ?...
‘ವಿಚಿತ್ರಾನ್ನ’ ಅಡುಗೆಮನೆಯಲ್ಲಿ ಈ ಬಾರಿ ಕ್ಯಾರೆಟ್‌(ಗಜ್ಜರಿ)ನದೇ ಮಾತು. ಅಂದಹಾಗೆ ನಾನಾರೀತಿಯ ಮ್ಯೂಸಿಯಂಗಳು ನಮಗೆ ಗೊತ್ತು. ಆದರೆ ‘ಗಜ್ಜರಿ’ ಮ್ಯೂಸಿಯಂ ಬಗ್ಗೆ ಕೇಳಿದ್ದೀರಾ?ಶ್ರೀವತ್ಸ ಜೋಶಿಒಂದ್‌ ಮೊಲದ್‌ಮರಿ ಇತ್ತು. ಅದಕ್ಕೆ ಕ್ಯಾರೆಟ್‌ ಅಂದ್ರೆ ತುಂಬಾ ಇಷ್ಟ. ಆದ್ರೆ ಯಾವ ಅಂಗಡೀಲಿ ಕ್ಯಾರೆಟ್‌ ಸಿಗುತ್ತೆ ಅಂತ ಅದಕ್ಕೆ ಗೊತ್ತಿಲ್ಲ. ಮನೆಗೆ ಹತ್ರ ಇರೋದು ಕಿರಾಣಿ ಅಂಗಡಿ ಒಂದೇ. ಪಾಪ, ದಿನಾ ಅಲ್ಲಿಗ್ಹೋಗಿ..

More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು