‘ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...ನೆನೆಯುವುದು ಎಲ್ಲರಿಗೂ ಇಷ್ಟ! ಮನಸ್ಸಿಗೆ ಹತ್ತಿರವಾದವರನ್ನು ನೆನೆಯುವುದಾದರೂ ಇರಬಹುದು.. ಮಳೆಯಲ್ಲಿ ನೆನೆಯುವುದಾದರೂ ಆಗಬಹುದು.. ಒಟ್ಟಿನಲ್ಲಿ ನೆನೆಯುವ ಪ್ರಕ್ರಿಯೆಯಲ್ಲಿ ಏನೋ ಒಂದು ಸುಖವಿದೆ. ಸುಖದ ಜೊತೆಗೆ ಸ್ವಾರಸ್ಯವೂ ಇದೆ. ಈ ಬಗ್ಗೆ ವಿಚಿತ್ರಾನ್ನ 247ರಲ್ಲಿ ಏನೇನೋ ಇದೆ!ಶ್ರೀವತ್ಸ ಜೋಶಿನಿಘಂಟು ತೆರೆದು ನೋಡಿದರೆ `ನೆನೆ ಎಂಬ ಕ್ರಿಯಾಧಾತುರೂಪದ ಶಬ್ದಕ್ಕೆ ನಿಮಗೆ ನಾನಾ ಅರ್ಥಗಳೂ, ಸಮಾನಾರ್ಥಕ ಪದಗಳೂ ಸಿಗಬಹುದು. ಆದರೆ ಸ್ಥೂಲವಾಗಿ..
‘ನೆನೆ’ಯದೆ ಇರಲಾರೆ ಸ್ವಾಮೀ ನಿನ್ನ...`ನೆನೆ ಪದದಿಂದಲೇ ವ್ಯುತ್ಪತ್ತಿಯಾದ `ನೆನೆಗುದಿ ಎಂಬೊಂದು ಪದ ಇದೆ. ಅನಿಶ್ಚಿತತೆ, ಪೇಚು, ತಳಮಳ ಎಂದು ಅರ್ಥ. ಬಹುಶಃ ನೆನೆಸಲು ಬಳಸುವ ನೀರು ಅತಿಬಿಸಿಯಾಗಿ ಕುದಿಯತೊಡಗಿದರೆ ಆ ವಸ್ತು ಅಥವಾ ಸಂಗತಿ ಆಗ ನೆನೆಗುದಿಯಲ್ಲಿ ಬಿದ್ದಂತೆಯೇ. `ಕಾವೇರಿ ನೀರು ಹಂಚಿಕೆಯ ಸಮಸ್ಯೆ ನೆನೆಗುದಿಗೆ ಅತಿ ಸಮರ್ಪಕ ಉದಾಹರಣೆ. ಯಾಕೆಂದರೆ ಅದರಲ್ಲಿ ನೆನೆಸಲು ನೀರೂ ಇದೆ, ಆ ನೀರು ಸರಿಯಾಗಿ..
ಪಿಬಿಎಸ್ ಬಗ್ಗೆ ಓದಿದಾಗ ನಮ್ಮಜ್ಜಿ ನೆನಪಾದಳು!ಆತ್ಮೀಯ ಶ್ರೀವತ್ಸ ಜೋಶಿಯವರೆ,ನೀವು ಬರೆದ ಪಿ.ಬಿ. ಶ್ರೀನಿವಾಸ್ ಲೇಖನ ಓದಿ, ಅವರ ಒಂದು ಹಾಡು ಕೇಳಿದಷ್ಟೇ ಸಂತೋಷವಾಯಿತು. ಅಲ್ಲದೇ ನನ್ನ ಮನಸ್ಸು ನಾಲ್ಕು ದಶಕ ಹಿಂದಕ್ಕೆ ಹೋಯಿತು.ಆಗ ನನ್ನ ತಂದೆ ಶಿವಮೊಗ್ಗದಲ್ಲಿ ಡಾಕ್ಟರಾಗಿದ್ದರು. ನಮ್ಮ ಅಜ್ಜಿ (ನನ್ನ ತಂದೆಯ ದೊಡ್ಡಮ್ಮ) ಸಹ ನಮ್ಮೊಡನೆ ಇದ್ದಳು. ಹನ್ನೆರಡು ವರ್ಷ ವಯಸ್ಸಿಗೆ ಮದುವೆಯಾಗಿ ಮೂರು ತಿಂಗಳಿಗೆ ಗಂಡನನ್ನು..
ನಕಾಶೆ ನೋಡುವ ನೈಪುಣ್ಯ ನಾರಿಯರಿಗೇಕಿಲ್ಲ?ನ್ಯೂಯಾರ್ಕ್‍ನ ರಾಚೆಸ್ಟರ್ ಯುನಿವರ್ಸಿಟಿಯ ಸೈಕಾಲಜಿ ಪ್ರೊಫೆಸರ್ ಟಾಮ್ ಬೆವರ್ ಮತ್ತವರ ತಂಡ ಒಮ್ಮೆ ಈ ಪ್ರಯೋಗವನ್ನು ಮಾಡಿತ್ತು. ಒಂದು ಚಕ್ರವ್ಯೂಹವನ್ನು ನಿರ್ಮಿಸಿ ಅದರೊಳಗೆ ಕೆಲ ಗಂಡು ಮತ್ತು ಹೆಣ್ಣು ಅಭಿಮನ್ಯುಗಳನ್ನು ಬಿಟ್ಟು ಅವರು ಎಷ್ಟು ಬೇಗ ಹೊರಬರುತ್ತಾರೆಂದು ಪರೀಕ್ಷಿಸಿದರು. ಸರಾಸರಿ ಅವಧಿ ಸಮಪ್ರಮಾಣದಲ್ಲೇ ಇತ್ತು. ಮುಂದಿನ ಹಂತದಲ್ಲಿ ಆ ಪರೀಕ್ಷಾರ್ಥಿಗಳಿಗೆ ಕೆಲವು ನಕ್ಷೆಗಳನ್ನು ತೋರಿಸಿ ಆಗಷ್ಟೇ ಅವರೆಲ್ಲ..
ನಕಾಶೆ ನೋಡುವ ನೈಪುಣ್ಯ ನಾರಿಯರಿಗೇಕಿಲ್ಲ?ಭಾಗ್ಯದ ಬಳೆಗಾರನಿಗೆ ಮುತ್ತೈದೆ ಹೆಣ್ಣು ತವರುಮನೆಗೆ ಹೋಗಲು ಬಾಳೆ, ಸೀಬೆ, ಗಾಣ, ಆಲೆಮನೆ, ನವಿಲು, ಸಾರಂಗ ಮುಂತಾಗಿ ಲ್ಯಾಂಡ್‌ಮಾರ್ಕ್‌ಗಳಿಂದಷ್ಟೇ ಡೈರೆಕ್ಷನ್ಸ್ ಕೊಟ್ಟ ಪರಿ ವೈಜ್ಞಾನಿಕವಾಗಿಯೂ ಸರಿಯಾಗಿಯೇ ಇದೆ. ಹೇಗೆ ಅನ್ನುವಿರಾ? ಓದಿ; ಈ ವಾರದ ವಿಚಿತ್ರಾನ್ನ(246).ಶ್ರೀವತ್ಸ ಜೋಶಿಭಾಗ್ಯದ ಬಳೆಗಾರನನ್ನು ತನ್ನ ತವರುಮನೆಗೂ ಒಮ್ಮೆ ಹೋಗಿಬರುವಂತೆ ಕೇಳಿದ ಮುತ್ತೈದೆಹೆಣ್ಣು, ಅವನಿಗೆ ಅಲ್ಲಿಗೆ ಹೋಗುವ ಡೈರಕ್ಷನ್ಸ್ ಕೊಟ್ಟದ್ದು ಹೇಗೆ? ``ಬಾಳೆಗಿಡ..
ಶ್ವೇತಾಭವನದಲೀ..ಹೂವಿಗೆ ಬಣ್ಣತಂದವನೆ..ಒಲವೆ ಮಿಸ್‌ಮಯಾ!`ಸರಿ ಮತ್ತೆ, ಇನ್ನೊಂದಿನ ಈ ನಿನ್ ಫಿಲಮ್ಮೂ ಅದೇ ಟಿವಿಯಲ್ಲಿ ಬರ್‍ತದೆ, ಅದ್ರಲ್ಲೇ ನೋಡಿದ್ರಾಯ್ತು!"``ಛೇ ಛೇ. ದೊಡ್ಡ ಸ್ಕ್ರೀನಲ್ಲಿ ನೋಡ್ಬೇಕ್ರೀ... ವಾಟರ್‌ಫಾಲ್ಸ್ ಎಲ್ಲ ಎಷ್ಟು ಚೆನ್ನಾಗಿ ತೋರ್‍ಸಿದ್ದಾರಂತೆರೀ ಐ ಡೋನ್ ವಾನ್ನಾ ಮಿಸ್ಸಿಟ್..."``ವಾಟರ್‌ಫಾಲ್ಸ್ ನೋಡೋದಕ್ಕೆ ಮೂವಿಗ್ ಯಾಕ್‌ಹೋಗ್ತೀ? ಮೊನ್ನೆ ತಾನೆ ಹೋಗಿದ್ವಲ್ಲ ಮಕ್ಳನ್ನೂ ಕರ್ಕೊಂಡು ನಯಾಗರಾ ಫಾಲ್ಸ್‌ಗೆ?"``ಅಲ್ಲಾರೀ ನಮ್ಮ ನಯಾಗರಾಕ್ಕಿಂತಲೂ ಚಂದದ ಜೋಗ್‌ಫಾಲ್ಸ್ ಅಂತ ಇಂಡಿಯಾದಲ್ಲಿದೆ ಅದನ್ನು..
ಶ್ವೇತಾಭವನದಲೀ..ಹೂವಿಗೆ ಬಣ್ಣತಂದವನೆ..ಒಲವೆ ಮಿಸ್‌ಮಯಾ!ಏನು? ನಿಜ್ವಾ? ಅಮೆರಿಕದ ಪ್ರಥಮ ಪ್ರಜೆ ಬುಶ್ ಮತ್ತು ಪ್ರಥಮ ಮಹಿಳೆ ಅರ್ಥಾತ್ ಬುಶ್ ಪತ್ನಿ ಲಾರಾ ಮಾತಿನ ಮಧ್ಯೆ `ಮುಂಗಾರು ಮಳೆ ಯೇ? ಅವರು ಕನ್ನಡ ಚಿತ್ರನೋಡಿದ್ರಾ?ಕೂಡಲೇ ರುಚಿ ನೋಡಿ, ತಿಳಿ ಹಾಸ್ಯ ಬೆರೆತ ಸ್ಪೆಷಲ್ ವಿಚಿತ್ರಾನ್ನ(245). ಶ್ರೀವತ್ಸ ಜೋಶಿ ``ರೀ..
ಪ್ರತಿವಾದಿ ಭಯಂಕರ ಶ್ರೀನಿವಾಸ !ಸಂಸ್ಕೃತಪ್ರಿಯನಾದ ನನಗೆ, ಸಂಸ್ಕೃತದಲ್ಲೂ ಚಿತ್ರಗೀತೆ ಇರಲು ಸಾಧ್ಯ ಎಂದು ತೋರಿಸಿಕೊಟ್ಟ ಪಿಬಿಎಸ್ ಮೇಲಿನ ಅಭಿಮಾನ ಆ ಒಂದು ಹಾಡಿಂದಲೇ ದುಪ್ಪಟ್ಟಾಯಿತು ಎಂದರೆ ತಪ್ಪಲ್ಲ. ಚಂದ್ರಲೋಕಕ್ಕೆ ಮಾನವನ ಪದಾರ್ಪಣೆಯ ಸಂದರ್ಭದಲ್ಲಿ ಪಿ.ಬಿ.ಶ್ರೀನಿವಾಸ್ ಆ ಬಗ್ಗೆ ಒಂದು ಇಂಗ್ಲಿಷ್ ಕವನ ಬರೆದು ಅದನ್ನು ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಆಗಿನ ಅಮೆರಿಕಾಧ್ಯಕ್ಷ ರಿಚರ್ಡ್ ನಿಕ್ಸನ್ - ಇವರಿಬ್ಬರಿಗೂ ಕಳಿಸಿದ್ದರಂತೆ, ಮಾತ್ರವಲ್ಲ ಅವರಿಂದ..
ಪ್ರತಿವಾದಿ ಭಯಂಕರ ಶ್ರೀನಿವಾಸ !`ಪಿಬಿಎಸ್ ಈ ಹೆಸರಲ್ಲೇ ಏನೋ ಒಂದು ರೀತಿಯ ಇಂಪು! ಕಂಪು! ತಂಪು! ಅವರ ಹಾಡುಗಳನ್ನು ಕೇಳಿ ಸುಖಿಸದ, ವಾರೆವ್ಹಾ ಅನ್ನದ ಕನ್ನಡಿಗರು ಯಾರಿದ್ದಾರೆ? ಈ ವಾರ(ವಿಚಿತ್ರಾನ್ನ-244) ಪಿಬಿಎಸ್ ಬಗ್ಗೆ ಒಂದಿಷ್ಟು ಮಾತು ಮತ್ತು ಬಾಲ್ಯದ ನೆನಪು.ಶ್ರೀವತ್ಸ ಜೋಶಿನನಗೀಗಲೂ ನೆನಪಿದೆ. ಆಗ ನಾನು ಸುಮಾರು ಆರೇಳು ವರ್ಷದವನಿರಬಹುದು. ನಮ್ಮ ಮನೆಯಲ್ಲಿ ದೊಡ್ಡದೊಂದು ಫಿಲಿಪ್ಸ್ ರೇಡಿಯೊ ಇತ್ತು. ಐದು..
ವಿಶ್ವ ಪರಿಸರ ದಿನ-2007ಧರೆಗೆ ಡವಡವ - ಡಿಮ್ ಡಿಮ್ ಡಿಂಡಿಮ...ಬೆಳಗ್ಗೆ ಎದ್ದು ಸೂರ್ಯ ನಮಸ್ಕಾರ ಹಾಕುವುದರ ಜೊತೆಗೆ, ಸೂರ್ಯನ ಸಂಕಟವನ್ನೂ ಸ್ವಲ್ಪ ಅರ್ಥ ಮಾಡಿಕೊಳ್ಳೋಣ! ಸೂರ್ಯನಿಗೆ ಕಷ್ಟ ಬಂದಿದೆ ಅಂದ್ರೆ, ನಮ್ಮನಿಮ್ಮಗಳ ಗತಿ ಏನು? ಕತ್ತಲ ದರ್ಬಾರು ಶುರುವಾದರೆ, ಬೆಳಕಿಗಾಗಿ ಎಲ್ಲಿಗೆ ಓಡಬೇಕು?ಶ್ರೀವತ್ಸ ಜೋಶಿಜೂನ್ 5ನೇ ತಾರೀಕು, ‘ವಿಶ್ವ ಪರಿಸರದಿನ’ವಾಗಿ ಆಚರಿಸಲ್ಪಡುತ್ತದೆ. ನಮ್ಮ ಪರಿಸರ ಮತ್ತು ಅದರ ಆಯುರಾರೋಗ್ಯ ನಿರ್ಧಾರವಾಗುವುದು ಪ್ರತ್ಯಕ್ಷವಾಗಿ/ಪರೋಕ್ಷವಾಗಿ ನಮ್ಮೆಲ್ಲರ ದೈನಂದಿನ ಚಟುವಟಿಕೆಗಳಿಂದ, ಪರಿಸರದ..