ಸಾವನ್ನು ಗೆದ್ದ ಟ್ಯೂಶನ್ ಮಾಸ್ಟರ್ ಬನ್ಸಾಲ್ದೇಹದ ಅರ್ಧ ಭಾಗವೇ ಸ್ವಾಧೀನದಲ್ಲಿಲ್ಲ ಎಂದು ಗೊತ್ತಾದ ನಂತರವೂ ಅಪಾರ ಜೀವನೋತ್ಸಾಹದಿಂದ ಬದುಕುತ್ತಿರುವ; ಸಾವು ಮಗ್ಗುಲಲ್ಲೇ ನಿಂತಿದೆ ಎಂದು ಗೊತ್ತಾದ ನಂತರವೂ ಇನ್ನೂ 20 ವರ್ಷ ಬದುಕ್ತೀನಿ ನೋಡ್ತಾ ಇರಿ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿರುವ ಬನ್ಸಾಲ್- ಚಿಕ್ಕ ಪುಟ್ಟ ಸೋಲಿಂದ ಹತಾಶರಾಗಿ ಗೋಳಾಡುವ ಎಲ್ಲರಿಗೂ ಮಾದರಿ. ಅಲ್ಲವೇ?* ಎಆರ್ ಮಣಿಕಾಂತ್ಇಲ್ಲಿ ಹೇಳಲು ಹೊರಟಿರುವುದು ಒಬ್ಬ ಮಹಾನ್ ಸಾಧಕನ...
ಈ ಕ್ಷಣದಿಂದಲೇ ಸಿಗರೇಟು ಸೇದೋದು ಬಿಡಿಸಿಗರೇಟು ಇಲ್ಲದಿದ್ದರೆ ಸಂಭ್ರಮವಿಲ್ಲ ಎಂದು ಹೇಳುವ ಅಣ್ಣ ತಮ್ಮಂದಿರೆಲ್ಲ ಸರ್ಫುದ್ದೀನ್‌ನ ಬದುಕಿನ ಕಥೆ ಮತ್ತು ವ್ಯಥೆಯನ್ನು ಅರ್ಥಮಾಡಿಕೊಳ್ಳಲಿ. ಸಿಗರೇಟಿಗೆ ಕಡೆಯ ಸಲಾಮು ಹೊಡೆಯಲು ಮುಂದಾಗಲಿ. ಹಾಗೆಯೇ ಮಾರಕ ರೋಗದ ವಿರುದ್ಧ `ಧ್ವನಿ'ಯೆತ್ತಿರುವ ಮುದುಕನಿಗೆ ಜಯವಾಗಲಿ. ಇದು ಆಶಯ ಮತ್ತು ಹಾರೈಕೆ.* ಎಆರ್ ಮಣಿಕಾಂತ್* `ಅವಳು' ಕಾರಣವಿಲ್ಲದೆಯೇ `ಕೈ' ಕೊಡುತ್ತಾಳೆ.* ಡಿಗ್ರಿ ಕಡೆಯ ವರ್ಷದ ಫಲಿತಾಂಶ ಶೇ.42ಕ್ಕೆ ಬಂದು..
ಸರ್ಫುದ್ದಿನ್ ಕಥೆ ಸಿಗರೇಟ್ ಪ್ರೇಮಿಗಳಿಗಾಗಿ ಮಾತ್ರಇದಿಷ್ಟನ್ನೂ ವಿವರವಾಗಿ ಹೇಳಲು ಕಾರಣವಾದದ್ದು ಸರ್ಫುದ್ದೀನ್ ಎಂಬಾತನ ಹೋರಾಟದ ಬದುಕು. 60 ವರ್ಷ ದಾಟಿರುವ ಈತ ಚೆನ್ನೈನವನು. ಸಿಗರೇಟಿನ ದಾಸಾನುದಾಸ ಎಂಬಂತೆ ಬದುಕಿದ ಸರ್ಫುದ್ದೀನ್‌ಗೆ ಈಗ ಮಾತು ಬಿದ್ದುಹೋಗಿದೆ. ಕ್ಯಾನ್ಸರ್ ಅಮರಿಕೊಂಡಿದೆ. ನಾನು ಹೆಚ್ಚು ದಿನ ಬದುಕುವುದಿಲ್ಲ ಎಂಬುದು, ಉಳಿದೆಲ್ಲರಿಗಿಂತ ಮೊದಲು ಸರ್ಫುದ್ದೀನ್‌ಗೇ ಗೊತ್ತಾಗಿ ಹೋಗಿದೆ. ಸ್ವಾರಸ್ಯವೆಂದರೆ, ಸಾವೆಂಬುದು ತನ್ನ ಹಿಂದೆಯೇ ಇದೆ ಎಂದು ಗೊತ್ತಾದ ನಂತರವೂ..
ಒಂದು ಎಸ್ಎಮ್ಎಸ್ ಅವನ ಜೀವ ಉಳಿಸಿತುಕರ್ರಗೆ, ಕಪ್ಪಗೆ, ಉದ್ದಕ್ಕಿದ್ದ ಆ ನೀಗ್ರೊ ಹುಡುಗನ ಹೆಸರು ಜಾನ್. ಅವನು ಲಂಡನ್‌ನ ಅಧಿಪತ್ಯಕ್ಕೆ ಒಳಪಟ್ಟಿದ್ದ ಒಂದು ಹಳ್ಳಿಯಲ್ಲಿದ್ದ. ಅವನ ತಂದೆ-ತಾಯಿ, ಶ್ರೀಮಂತರ ತೋಟದಲ್ಲಿ ಕೂಲಿ ಮಾಡುತ್ತಿದ್ದರು. ಜಾನ್ ಕೂಡ ಕೆಲಸಕ್ಕೆ ಹೋಗುತ್ತಿದ್ದ. ಬಿಡುವಿನ ದಿನಗಳಲ್ಲಿ ಸಮೀಪದ ಕಾಡಿಗೆ ಹೋಗುವುದು, ಅಲ್ಲಿ ಸಿಗುವ ಹಣ್ಣು ತಿಂದು ಖುಷಿ ಪಡುವುದು, ಮರದ ಮರೆಯಲ್ಲಿ ಅವಿತು ನಿಂತು ಬೆರಗಿನಿಂದಲೇ ಕಾಡು..
ಕೆಎಸ್ ನರಸಿಂಹಸ್ವಾಮಿ ಕಾವ್ಯಶಕ್ತಿಗೆ ನಮಸ್ಕಾರಇದು 1990ರ ಮಾತು. ಬೆಂಗಳೂರಿನ ಇಂದಿರಾನಗರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳಾಗಿ ಬರಲಿದ್ದವರು ಕೆ.ಎಸ್. ನರಸಿಂಹಸ್ವಾಮಿ. ಆ ವೇಳೆಗೆ ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಇಳಿವಯಸ್ಸಿನಲ್ಲಿ ಕವಿಗಳು ಹೇಗಿರಬಹುದು? ಅವರು ಯಾವ ಡ್ರೆಸ್ ಹಾಕಿಕೊಂಡು ಬರಬಹುದು? ಅವರೊಂದಿಗೆ `ಸಹಾಯಕರಂತೆ' ಯಾರು ಬರಬಹುದು? ಕವಿಗಳು ಯಾವ ವಿಷಯದ ಬಗ್ಗೆ ಮಾತಾಡಬಹುದು? ಬದುಕಿಡೀ ಪ್ರೀತಿ, ಪ್ರೇಮ, ಪ್ರಣಯದ..
ಅಮ್ಮನಂಥ ಉಮಾಶ್ರೀಗೆ...ರಾಷ್ಟ್ರಪ್ರಶಸ್ತಿ ವಿಜೇತೆ ಉಮಾಶ್ರೀ ಅವರಿಗೆ- ಹಾರ್ದಿಕ ಅಭಿನಂದನೆಗಳು.ಮೇಡಂ, ಹೌದಲ್ವಾ? ನಿಮಗೆ ಈಗ ಬಿಡುವು ಅನ್ನೋದೇ ಇಲ್ಲ. ನಾಡಿನ ಮೂಲೆ ಮೂಲೆಯಿಂದ ಅಭಿನಂದನೆಗಳ ಮಹಾಪೂರ. `ನಮ್ಮೂರಿಗೆ ಬನ್ನಿ, ನಮ್ಮೂರಿಗೆ ಬನ್ನಿ' ಎಂಬ ಆಹ್ವಾನಗಳು ಒಂದರ ಹಿಂದೊಂದು ಬರ್‍ತಿವೆ. ಯಾವುದೇ ಊರಿಗೆ ಹೋದರೂ ಅಭಿಮಾನಿಗಳು, ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಓಡೋಡಿ ಬರ್‍ತಿದಾರೆ. `ನಿಮಗೆ ರಾಷ್ಟ್ರ ಪ್ರಶಸ್ತಿ ಬಂತಲ್ಲ ಮೇಡಂ,..
ಸಾವು, ಕರೆಯದೇ ಬರುವ ಅತಿಥಿಅದೊಂದು ಶನಿ, ಅದಕ್ಕೊಂದು ಶಿಸ್ತಿಲ್ಲ. ನಿಯತ್ತಿಲ್ಲ. ಕರುಣೆಯಿಲ್ಲ. ದಯೆ-ದಾಕ್ಷಿಣ್ಯವಿಲ್ಲ. ಬಡವ-ಬಲ್ಲಿದರೆಂಬ ಬೇಧವಿಲ್ಲ. ಖದೀಮರನ್ನು ಕಂಡರೆ ಹೆದರಿಕೆಯಿಲ್ಲ. ಮಕ್ಕಳನ್ನು ಕಂಡರೆ ವಿಶೇಷ ಪ್ರೀತಿಯೂ ಇಲ್ಲ. ರೋಗಿಗಳ ಮೇಲೆ ಅದಕ್ಕೆ ಅನುಕಂಪವಿಲ್ಲ. ನಿರ್ಗತಿಕರ ಬಗ್ಗೆ ವಿಶೇಷ ಒಲವೂ ಇಲ್ಲ. ಶ್ರೀಮಂತರೊಂದಿಗೆ ಅದು ಚೌಕಾಸಿಗೆ ನಿಲ್ಲುವುದಿಲ್ಲ. ಪಾಪ, ಬಡವ ಎಂದು ಬಿಟ್ಟು ಹೋಗುವುದೂ ಇಲ್ಲ. ಮನುಷ್ಯರ ಕಥೆ ಹಾಗಿರಲಿ, ಮೂಕ ಪ್ರಾಣಿಗಳ..
ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಲ್‌ಫ್ರೆಡೋ ಕ್ವಿನಾನ್ಸ್ಒಂದು ಕಾಲದಲ್ಲಿ `ಅವನನ್ನು' ಅಮೆರಿಕದ ಜನ ತಲೆಯೊಳಗೆ ಸಗಣಿ ತುಂಬಿಕೊಂಡ ಪೆಕರಾ ಅಂದಿದ್ದರು. ಅಂಥ ಅಮೆರಿಕನ್ನರ ಮುಂದೆಯೇ `ಆತ' ನಂಬರ್ ಒನ್ ಮೆದುಳು ಶಸ್ತ್ರಚಿಕಿತ್ಸಾ ತಜ್ಞನಾಗಿ ಬೆಳೆದು ನಿಂತ! ಆತನೇ ನಮ್ಮ ಕಥಾನಾಯಕ ಆಲ್‌ಫ್ರೆಡೋ ಕ್ವಿನಾನ್ಸ್ ಹಿನಾಜೋಸಾ. ಅಮೆರಿಕದಲ್ಲಿ ಈಗ ನಂ.1 ಮೆದುಳು ಶಸ್ತ್ರಚಿಕಿತ್ಸಾ ತಜ್ಞ.* ಎಆರ್ ಮಣಿಕಾಂತ್ವೈದ್ಯರೊಬ್ಬರ ಮಗ ವೈದ್ಯನಾಗುವುದು, ತಹಸೀಲ್ದಾರರ ಮಗ ಡಿ.ಸಿ. ಆಗುವುದು,..
ಮೆದುಳು ಶಸ್ತ್ರಚಿಕಿತ್ಸಾ ತಜ್ಞ ಆಲ್‌ಫ್ರೆಡೋ ಕ್ವಿನಾನ್ಸ್(ಮುಂದುವರಿದಿದೆ)ಅವನ ಶ್ರದ್ಧೆಯ ಮುಂದೆ ವಿಜ್ಞಾನವೂ ಸೋತಿತುಮರುದಿನವೇ ಮೆಕ್ಸಿಕೋಗೆ ಮರಳಿದ ಕ್ವಿನಾನ್ಸ್ ಶಾಲೆಗೆ ಸೇರಿಕೊಂಡ. ಹಾಗೂ ಹೀಗೂ ಪ್ರಾಥಮಿಕ ಶಿಕ್ಷಣ ಮುಗಿಸಿದ. ಪ್ರೌಢಶಾಲಾ ಶಿಕ್ಷಣ ಮುಗಿಸಲು ಹಣದ ತೊಂದರೆ ಎದುರಾಯಿತು. ಆಗ ಒಂದು ವರ್ಷ ಸ್ಕೂಲು ಬಿಡಲು ಕ್ವಿನಾನ್ಸ್ ನಿರ್ಧರಿಸಿದ. ಹಾಗೆ ಶಾಲೆ ಬಿಟ್ಟವನು ಸೀದಾ ಅಮೆರಿಕಾದ ಫಾರ್ಮ್ ಹೌಸ್‌ಗೆ ಬಂದ. ತೋಟದ ಮಾಲಿ ಕೆಲಸಕ್ಕೆ ಸೇರಿಕೊಂಡ. ಊಟ..
ಬರವಣಿಗೆ ಮೂಲಕ ಭವಿಷ್ಯ ತಿಳಿಯಿರಿ!ನಮ್ಮ ಕೈಬರಹ, ಪತ್ರ ಬರೆಯುವ ಧಾಟಿ, ಅದರಲ್ಲಿ ಕಂಡು ಬರುವ ಶಿಸ್ತು, ಅಶಿಸ್ತು, ಅವಸರ, ಶ್ರದ್ಧೆ, ಅಕ್ಷರ ಬಳಕೆಯ ರೀತಿಯಿಂದಲೂ ಭವಿಷ್ಯ ಹೇಳಬಹುದು ಅಂದರೆ ನಂಬುತ್ತೀರಾ? ನಂಬುವವರ ಪಾಲಿಗಷ್ಟೇ ಇದು ನಿಜ. ಯಾವ ರೀತಿ ಬರೆಯುವವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದಕ್ಕೆ ಇಲ್ಲಿ ವಿವರಣೆಯಿದೆ. ಪತ್ರ ಬರೆಯುವ ಕಲೆ ನಶಿಸಿಹೋಗುತ್ತಿದೆ ಎಂಬುದನ್ನು ನಂಬಬಹುದಾದರೂ ನಮ್ಮ ವ್ಯಕ್ತಿತ್ವ ತಿಳಿದುಕೊಳ್ಳಲು ಪತ್ರ..