clear
clear
clear
clear
ಮುಖಪುಟ » ಅಂಕಣಗಳು » ನೂರೆಂಟುಮಾತು
ನೂರೆಂಟು ಮಾತು ಲೇಖನಗಳನ್ನು ಓದಿರಿ

ಅಂದು ಹಾರಿಹೋದ ಪಾರಿವಾಳಗಳೆಲ್ಲ ಹೋದವೆಲ್ಲಿಗೆ?
ಸಮಸ್ಯೆಯೆಂದರೆ ಯಾರಿಗೂ ಬೇಡ. ಇನ್ನು ಸಮಸ್ಯೆಯ ಕತ್ತಲ ಬಾವಿಯೊಳಗಿಳಿದು ಪರಿಹಾರದ ನೀರು ಸೇದುವುದರಲ್ಲಿ ಯಾರಿಗೂ ಆಸಕ್ತಿಯಿರುವುದಿಲ್ಲ. ನಮಗೆ ಎಲ್ಲವೂ ರೆಡಿಮೇಡ್ ಸಿಗಬೇಕು. ಎಷ್ಟೆಂದರೂ ಇದು "Ready to eat" ಕಾಲ ತಾನೆ. ಆದರೆ ಕೆಲವರಿರುತ್ತಾರೆ, ಅವರು ತಮ್ಮದೇ ಪ್ರಪಂಚದಲ್ಲಿ ಇರುತ್ತಾರೆ. ಅವರಿಗೆ ಲಾಭ, ನಷ್ಟದ ಗೊಡವೆಯೂ ಇರುವುದಿಲ್ಲ. ಸಮಯದ ಪರಿವೆಯೂ ಇರುವುದಿಲ್ಲ. ಕೈಗೆತ್ತಿಕೊಂಡ ಕೆಲಸ ಮುಗಿಸುವತನಕ ಸಮಾಧಾನ...


ನಮ್ಮ ಬದುಕಿದೆಯಲ್ಲ, ಅದರ ಉದ್ದೇಶವೇನು?
ಈ ಪ್ರಶ್ನೆಗೆ ಉತ್ತರ ಯಾರಿಗೂ ಗೊತ್ತಿಲ್ಲ. ಹಾಗೆನ್ನುವುದಕ್ಕಿಂತ ಎಲರೂ ಒಪ್ಪುವಂಥ ಉತ್ತರವನ್ನು ಯಾರೂ ಕೊಟ್ಟಿಲ್ಲ. ಕೊಟ್ಟರೂ ಅದರಿಂದ ಎಲ್ಲರಿಗೂ ಸಮಾಧಾನ ಸಿಕ್ಕಿಲ್ಲ ಎನ್ನಬಹುದೇನೋ. ಏಕೆಂದರೆ, ಈ ಪ್ರಶ್ನೆಗೆ ಸಿಗುವ ಉತ್ತರ ಪುನಃ ಪುನಃ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕೊನೆಗೆ ಪ್ರಶ್ನೆಯೊಂದೇ ಬೃಹದಾಕಾರವಾಗಿ ಕಾಡುತ್ತದೆ. ಅನೇಕ ದಾರ್ಶನಿಕರು, ತತ್ತ್ವಜ್ಞಾನಿಗಳು ಈ ಪ್ರಶ್ನೆಯನ್ನು ಇಟ್ಟುಕೊಂಡು ಜೀವ ಸವೆಸಿದ್ದಾರೆ. ಉತ್ತರ ಸಿಗದೇ..


ಬಡಪ್ಯೂನ್ ಮಗ ಪಂಚತಾರಾ ಹೋಟೆಲ್ ಕಟ್ಟಿದ!
ಜೀವನದಲ್ಲಿ ಕೆಲವರನ್ನು ಭೇಟಿ ಮಾಡಲೇಬೇಕೆಂದು ಅಂದುಕೊಂಡಿರುತ್ತೇವೆ. ಆದರೆ ಆಗುವುದಿಲ್ಲ.ನಾನಂತೂ ನನ್ನ ಜೀವನದಲ್ಲಿ ಹೋಟೆಲ್ ಉದ್ಯಮದ ಇಬ್ಬರು ದಿಗ್ಗಜರನ್ನು ಭೇಟಿಯಾಗಬೇಕೆಂದಿದ್ದೆ. ಮೊದಲನೆಯವರು ಒಬೇರಾಯ್ ಹೋಟೆಲ್‌ನ ಮಾಲೀಕ ರಾವ್‌ಬಹಾದೂರ್ ಮೋಹನ್ ಸಿಂಗ್ ಒಬೇರಾಯ್ ಹಾಗೂ ಎರಡನೆಯವರು ನೀವು.' ಹಾಗೆಂದು ಹಸ್ತ ಚಾಚಿದೆ. ಅವರು ಎರಡೂ ಕೈಗಳಿಂದ ಬರಸೆಳೆದು ಬರಮಾಡಿಕೊಂಡರು. ಆ ಆತ್ಮೀಯ ಸ್ವಾಗತದ ಅಪ್ಪುಗೆಯಲ್ಲಿಯೇ ಅವರು ಮನಗೆದ್ದಿದ್ದರು. ಮುಂದಿನ ಮೂರು..


ಯಾರೇ ಬರಲಿ, ಹೋಗಲಿ ಸರಕಾರವೆಂಬ ಕತ್ತೆ ವರ್ತಿಸೋದೇ ಹೀಗೆ
ಸರಕಾರ ಅಂದ್ರೆ ದಪ್ಪ ಚರ್ಮದ ಕಿವುಡ ಕತ್ತೆ ಇದ್ದಂತೆ! ಎಷ್ಟೇ ಹೊಡೆಯಿರಿ, ಬಡಿಯಿರಿ, ಲಬೋ ಅಂತ ಬಾಯಿಬಡಿದುಕೊಳ್ಳಿ ಉಹುಂ ಅದಕ್ಕೇನೂ ಆಗುವುದಿಲ್ಲ. ಹೋಗಲಿ, ಅದರ ಮುಂದೆ ಅಂಗಾತವೋ, ಬೋರಲೋ ಬಿದ್ದು ಸಾಯಿರಿ, ಅದು ಜಪ್ಪಯ್ಯ ಎನ್ನುವುದಿಲ್ಲ. ಅದು ಅದರ ಪಾಡಿಗೆ ಹಾಯಾಗಿ ಏನೂ ನಡೆದೇ ಇಲ್ಲ ಎಂಬಂತೆ ಸುಮ್ಮನಿದ್ದುಬಿಡುತ್ತದೆ. ಹೊಸ ಮುಖ್ಯಮಂತ್ರಿ, ಮಂತ್ರಿಗಳು ಬರಲಿ, ಹೋಗಲಿ, ಸರಕಾರ..


ಹಳ್ಳಿ ಸಮಾಧಿ ಮೇಲೆ ತಲೆಯೆತ್ತಿರುವ ನಗರ
ರೈತ ಹೆದರಿಬಿಟ್ಟಿದ್ದಾನೆ. ಮರ್ಯಾದೆಯಿಂದ ಮೂರು ಹೊತ್ತು ಮೂರು ತುತ್ತು ತಿಂದುಂಡು ಹಾಯಾಗಿ ಇರಲಾಗದಂಥ ಸ್ಥಿತಿ ಬಂದು ಬಿಡಬಹುದಾ ಎಂಬ ಆತಂಕದಲ್ಲಿದ್ದಾನೆ. ಅವನ ಕಣ್ಣೀರನ್ನು ಒರೆಸಲು ಯಾರೂ ಮುಂದೆ ಬರುತ್ತಿಲ್ಲ. ಸಮಾಧಾನದ ಮೊಸಳೆ ಕಣ್ಣೀರನ್ನೂ ಯಾರೂ ಸುರಿಸುತ್ತಿಲ್ಲ. ಕೃಷಿಕರ ಜೀವನದಲ್ಲಿ ಭರವಸೆಯ ಹೊಸ ಪೈರು ಚಿಗುರೊಡೆಯಬಹುದೆಂಬ ಚಿಟಿಕೆ ವಿಶ್ವಾಸವೂ ಕಾಣಿಸುತ್ತಿಲ್ಲ.* ವಿಶ್ವೇಶ್ವರ ಭಟ್ರಿವರ್ಸ್ ಗೇರ್‌ನಲ್ಲಿ ಹೋದರೆ ಇಪ್ಪತ್ತು ವರ್ಷ..


ಅನಾಮಧೇಯ ವ್ಯಕ್ತಿಗಳ ಅಸಾಧಾರಣ ಸಾಧನೆ!
ಪುಸ್ತಕದೊಳಗೆ ಹಾದು ಹೋಗುವ ವ್ಯಕ್ತಿಗಳು ಇಷ್ಟೊಂದು ಗಾಢವಾಗಿ ಸ್ಫೂರ್ತಿ, ಪ್ರೇರಣೆಯ ಸಂಚಲನದ ಸಿಂಚನಗೈಯಬಹುದು ಎಂದುಕೊಂಡಿರಲಿಲ್ಲ. ಇತ್ತೀಚೆಗೆ ಅಂತಾರಾಷ್ಟ್ರೀಯ ಖ್ಯಾತಿಯ ಫೋಟೊಗ್ರಾಫರ್, ಅಪ್ಪಟ ಕನ್ನಡಿಗ, ಸ್ನೇಹಿತ ಮಹೇಶ್ ಭಟ್ ತಾವು ಅನಿತಾ ಪ್ರತಾಪ್ ಜತೆಗೂಡಿ ಬರೆದ 'Unsung' ಎಂಬ ಪುಸ್ತಕವನ್ನು ಕಳುಹಿಸಿಕೊಟ್ಟಿದ್ದರು. ನಿಮಗೆ ಮಹೇಶ್ ಭಟ್ ಗೊತ್ತಿರಬಹುದು, ಅವರು ಕರ್ನಾಟಕದ ಬಗ್ಗೆ ತೀರಾ ಅಪರೂಪವೆನಿಸುವ ಫೋಟೊಗಳಿರುವ ಪುಸ್ತಕ ಬರೆದಿದ್ದಾರೆ...


ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಸುಭಾಷಿಣಿ ಮಿಸ್ತ್ರಿ!
ಆಕೆ ಸುಭಾಷಿಣಿ ಮಿಸ್ತ್ರಿ! ಅವಳದ್ದೊಂದು ವಿಚಿತ್ರ, `ಭಯಂಕರ' ಕತೆ. ಸುಭಾಷಿಣಿ ಹುಟ್ಟಿದಾಗ ಇಡೀ ಬಂಗಾಳದಲ್ಲಿ ಕಡುಕ್ಷಾಮ. ಅವಳ ಅಪ್ಪ ಸಣ್ಣ ರೈತ. ಮನೆಯಲ್ಲಿ ಹದಿನಾಲ್ಕು ಮಕ್ಕಳ ಸಂಸಾರ. ತುಂಬಿದ ಬಡತನ. ತಾಯಿ ಬೀದಿ ಬೀದಿಯಲ್ಲಿ ಬೇಡಿ ತಂದ ತಂಗಳನ್ನು ಮಕ್ಕಳಿಗೆ ಉಣಿಸುತ್ತಿದ್ದಳು. ಅವಳು ಏನೇ ಕೆಲಸ ಮಾಡಿದರೂ ಮಕ್ಕಳನ್ನು ಸಾಕುವುದು ಸಾಧ್ಯವೇ ಇರಲಿಲ್ಲ. ಕೆಲವೇ ವರ್ಷಗಳಲ್ಲಿ ಆ..


ಐ ಫೋನ್ ಸೃಷ್ಟಿಸಿದವನ ಬದುಕೇ ಒಂದು ಮಾದರಿ
'ಹೆಂಡತಿಯನ್ನು ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಮೊಬೈಲ್ ಬಿಟ್ಟು ಅರ್ಧ ದಿನ ಸಹ ಇರಲಾಗುವುದಿಲ್ಲ' ಎಂದು ಹಿಂದೊಮ್ಮೆ ವಕ್ರತುಂಡೋಕ್ತಿ ಬರೆದಿದ್ದೆ. 'ಹೆಂಡತಿ ಕಳೆದುಹೋದರೆ ಸಿಗುತ್ತಾಳೆ, ಆದರೆ ಮೊಬೈಲ್ ಹಾಗಲ್ಲ' ಎಂಬುದು ಮತ್ತೊಂದು ವಕ್ರತುಂಡೋಕ್ತಿ. ಆದರೆ ನೀವೇನಾದರೂ ಆಪಲ್ ಕಂಪನಿಯ ಐಫೋನ್ ಬಳಸುತ್ತಿದ್ದರೆ ಮೇಲಿನ ವಕ್ರತುಂಡೋಕ್ತಿಯನ್ನು ತುಸು ಹೀಗೆ ಬದಲಿಸಬಹುದು 'ಹೆಂಡತಿ ಬಿಟ್ಟು ವಾರಗಟ್ಟಲೆ ಇರಬಹುದು.ಆದರೆ ಐಫೋನ್ ಬಿಟ್ಟು ಒಂದು..


ಅರ್ಥಕ್ಕೂ ನಿಲುಕದ ಅನರ್ಥಕ್ಕೂ ಸಿಲುಕದ ಕಮಲಾದಾಸ್
ಮಧ್ಯಮ ವರ್ಗದ ಕುಟುಂಬಗಳ ಹೆಣ್ಣುಮಕ್ಕಳದು ಗೋಳಿನ ಕತೆ. ಆ ಹೆಣ್ಣುಮಕ್ಕಳಿಗೆ ಹಾಸಿಗೆ ಮೇಲೆ ಸುಖವೆಂಬುದು ಹುಡುಕಿದರೂ ಸಿಗುವುದಿಲ್ಲ. ಹಾಗೆ ನೋಡಿದರೆ ಅವರ ಪಾಲಿಗೆ ಹಾಸಿಗೆಯೇ ಶಿಲುಬೆ. ಗಂಡಸರು ಅವಳ ಮೇಲೆ ಕಾಮದಾಹದಿಂದ ಬೀಳುತ್ತಾರೆ, ಹೊರತು ಪ್ರೀತಿಯಿಂದ ಅಲ್ಲ. ಕೊನೆಗೂ ಅವಳಿಗೆ ಪ್ರೀತಿ ಮರೀಚಿಕೆಯಾಗಿಯೇ ಉಳಿಯುತ್ತದೆ. ಈ ಪ್ರೀತಿ ಹುಡುಕಾಟದಲ್ಲಿ ಅವಳಿಗೆ ಜೀವನ ಮುಗಿದು ಹೋಗಿರುವುದು ಗೊತ್ತೇ ಆಗುವುದಿಲ್ಲ.'..


More: 1  2  3  4  5  6  7  8  9  10  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು