clear
clear
clear
clear
ಮುಖಪುಟ » ನಾಗರಿಕ ಪತ್ರಕರ್ತ » ಪೂರ್ಣಚಂದ್ರ ಮಾಗಡಿ
Poornachandra Magadi Articles

ಎಲ್ಲಿದೆಯೋ ನ್ಯಾಯ ಅಣ್ಣಾ ಎಲ್ಲಿದೆಯೋ ನ್ಯಾಯ?
ಮಾಗಡಿ, ನ. 12 : ಸಾಮಾನ್ಯವಾಗಿ ಪ್ರೀತಿಯ ಬಲೆಗೆ ಸಿಕ್ಕಿಕೊಂಡ ಪ್ರೇಮಿಗಳಿಗೆ ವಿವಾಹವಾಗಲು ಪೋಷಕರು ಅಡ್ಡಿಯಾಗುತ್ತಾರೆ. ಆದರೆ ಪೋಷಕರ ಒಪ್ಪಿಗೆ ಪಡೆದು ಅಂತರ್ಜಾತಿಯ ಪ್ರೇಮವಿವಾಹವಾದ ಯುವ ಜೋಡಿಗಳು ತಮ್ಮ ಕುಲಬಾಂಧವರಿಂದಲೇ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದಾರೆ. ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದುಡುಪನಹಳ್ಳಿಯಲ್ಲಿ ಸೋಲಿಗ ಜನಾಂಗದ ಯುವಕ ಗಂಗಾಮತಸ್ಥ ಜನಾಂಗದ ಯುವತಿಯನ್ನ ವರಿಸಿದ್ದಕ್ಕಾಗಿ ಬಹಿಷ್ಕಾರದ ಶಿಕ್ಷೆಯನ್ನೆದುರಿಸಬೇಕಾಗಿದೆ.ಸಮಾಜದಲ್ಲಿ ಸಮಾನತೆ ಮೂಡಿಸಬೇಕಾಗಿರುವ ಇಂತಹ...


ಯೋಗೀಶ್ವರ್‌ಗೆ ಬಿಜೆಪಿ ಸಾಕಾಯಿತೇ?
ಚನ್ನಪಟ್ಟಣ, ನ. 9 : ಚನ್ನಪಟ್ಟಣದ ಮಾಜಿ ಶಾಸಕ ಸಿಪಿ ಯೋಗೀಶ್ವರ್ ಮಂತ್ರಿಯಾಗುವ ಭ್ರಮೆಯಿಂದ ಆಪರೇಷನ್ ಕಮಲಕ್ಕೊಳಗಾಗಿದ್ದರು. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿಯವರ ವಿರುದ್ದ ಹೀನಾಯವಾಗಿ ಪರಾಭವಗೊಂಡರು. ನಂತರ ಎದುರಾದ ಚನ್ನಪಟ್ಟಣ ಉಪಚುನಾವಣೆಯಲ್ಲೂ ಕ್ಷೇತ್ರದ ಮತದಾರರಿಂದ ತಿರಸ್ಕೃತಗೊಳಗಾದರು. ಕೇಸರಿ ಪಾಳೆಯಕ್ಕೆ ಜಿಗಿಯುವ ಮೊದಲು ಮತ್ತು ನಂತರ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ವಿರುದ್ದ ಬಹಿರಂಗವಾಗಿ ಬಾಯಿಗೆ ಬಂದಂತೆ..


ಸಾಲಬಾಧೆ : ಇಡೀ ಕುಟುಂಬ ಆತ್ಮಹತ್ಯೆಗೆ ಶರಣು
ರಾಮನಗರ, ನ. 5 : ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ರವರ ಸ್ವಗ್ರಾಮ ರಾಮನಗರ ಜಿಲ್ಲೆ ದೊಡ್ಡಾಲಹಳ್ಳಿಯ ಕುಟುಂಬವೊಂದು ಸಾಲಬಾಧೆ ತಾಳಲಾರದೆ ಸಾಮೂಹಿಕ ಆತ್ಯಹತ್ಯೆಗೆ ಶರಣಾಗಿದೆ. ಕಳೆದೆರಡು ದಿನಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ದಂಪತಿ ಮತ್ತು ಮಕ್ಕಳು ನಿನ್ನೆ ರಾತ್ರಿ ಎಲ್ಲರೂ ಮೃತಪಟ್ಟಿದ್ದಾರೆ.ಮೃತರ ಅಂತ್ಯಕ್ರಿಯೆ ಇಂದು ದೊಡ್ಡಾಲಹಳ್ಳಿಯಲ್ಲಿ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಯಿಂದ ವಾಪಸಾಗಿ ಅಂತ್ಯಕ್ರಿಯೆಯಲ್ಲಿ..


ಯಡಿಯೂರಪ್ಪಗೆ ಚನ್ನಪಟ್ಟಣ ರೈತರ ಹಿಡಿಶಾಪ
ಚನ್ನಪಟ್ಟಣ, ಅ. 28 : ವಿದ್ಯುತ್ ಸರಬರಾಜು ವಿಚಾರದಲ್ಲೂ ಕೂಡ ಹಳೇ ಮೈಸೂರು ಪ್ರಾಂತ್ಯವನ್ನ ಬಿಜೆಪಿ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಇದರಿಂದ ಜಿಲ್ಲೆಯಾದ್ಯಾಂತ ಸಮರ್ಪಕ ವಿದ್ಯುತ್ ಸರಬರಾಜಿಲ್ಲದೇ ರೈತರು ಮತ್ತು ರೇಷ್ಮೆ ರೀಲರ್‌ಗಳು ಸಂಕಷ್ಟದಲ್ಲಿರುವಂತಾಗಿದೆ.ವಿದ್ಯುತ್‌ನ್ನೇ ನಂಬಿ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನ ನಡೆಸುತ್ತಿರುವ ಮಾಲೀಕರಿಗೆ ಅನಿಯಮಿತ ಲೋಡ್‌ಶೆಡ್ಡಿಂಗ್‌ನಿಂದ ಸಂಕಷ್ಟದಲ್ಲೇ ಬದುಕು ದೂಡುವಂತಾಗಿದೆ. ಬಿಜೆಪಿ ಸರ್ಕಾರದ ಉದಾಸೀನ..


ಮಾಗಡಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ
ರಾಮನಗರ, ಅ. 25 : ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಪೋಲೀಸ್ ಠಾಣಾ ವ್ಯಾಪ್ತಿಯ ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿಯ ಚಿಕ್ಕಕಲ್ಯಾ ಕ್ರಾಸ್ ಬಳಿ ಅಪರಿಚಿತ ವಿವಾಹಿತ ಮಹಿಳೆಯ ಶವಪತ್ತೆಯಾಗಿದೆ.ಸುಮಾರು 5.2 ಅಡಿ ಎತ್ತರವಿರುವ ಮಹಿಳೆಯ ಬಲಗೈ ಮೇಲೆ ಹಿಂದಿಯಲ್ಲಿ ಓಂಕಾರದ ಹಚ್ಚೆ ಗುರುತಿದೆ. ಮಹಿಳೆಯ ಕೈ ಮತ್ತು ಕಾಲು ಮೇಲೆ ಹಾಕಿರುವ ಮೆಹಂದಿಯ ಗುರುತು ಕೂಡ..


ಅನಾಥ ಮಗುವನ್ನು ಲಾಲಿಸಿದ ಚನ್ನಪಟ್ಟಣದ ಜನತೆ
ಚನ್ನಪಟ್ಟಣ, ಅ. 20 : ತಮಗೆ ಬೇಡವಾಗಿದ್ದ ಮಗುವನ್ನು ಹೆತ್ತಕೂಡಲೇ ತಾಯಿ ಮಮಕಾರ ಕೂಡ ತೋರದೆ ತಿಪ್ಪೆಗುಂಡಿಯಲ್ಲಿ ಎಸೆದೋ, ದೇವಸ್ಥಾನದ ಮೆಟ್ಟಿಲ ಮೇಲೆ ಇಟ್ಟೋ ಕಣ್ಮರೆಯಾಗುವ ಮಹಾತಾಯಿಯರು ಅನೇಕರು ಸಿಗುತ್ತಾರೆ. ಆದರೆ, ಥೇಟ್ ಸಿನೆಮಾ ರೀತಿಯಲ್ಲಿ ಈರೀತಿ ಅನಾಥವಾದ ಮಗುವನ್ನು ಪ್ರಕೃತಿಯೇ ಕಾಪಾಡಿದ, ದಾರಿಹೋಕರೊಬ್ಬರು ರಕ್ಷಿಸಿ, ಚನ್ನಪಟ್ಟಣದ ಜನತೆಯೇ ಲಾಲಿಸಿದ ಹೃದ್ಯ ಘಟನೆ ಚನ್ನಪಟ್ಟಣದಲ್ಲಿ ಜರುಗಿದೆ.ಪೋಷಕರಿಗೆ ಬೇಡವಾಗಿ..


ರಸ್ತೆಯಲ್ಲಿ ಈಡುಗಾಯಿ ಒಡೆದು ರೈತರ ಆಕ್ರೋಶ
ಚನ್ನಪಟ್ಟಣ, ಅ. 5 : ತೆಂಗು ಬೆಳೆಗೆ ಸರ್ಕಾರ ಬೆಂಬಲಬೆಲೆ ನೀಡಬೇಕೆಂದು ಆಗ್ರಹಿಸಿ ತೆಂಗು ಬೆಳೆಗಾರರ ಹೋರಾಟ ಸಮಿತಿ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ರಸ್ತೆಯಲ್ಲಿ ತೆಂಗಿನಕಾಯಿ ಈಡುಗಾಯಿ ಒಡೆಯುವುದರ ಮೂಲಕ ಸೋಮವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಸಂದರ್ಭದಲ್ಲಿ ಕೆಲಕಾಲ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.ತೆಂಗುಬೆಳೆಯನ್ನೇ ಪ್ರಧಾನ ಕೃಷಿಯನ್ನಾಗಿಸಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ರೈತಾಪಿ..


ಸರಳ ವ್ಯಕ್ತಿತ್ವದ ರಾಜಕಾರಣಿ ಡಿಟಿ ಜಯಕುಮಾರ್
ಡಿ.ಟಿ.ಜಯಕುಮಾರ್‌ರವರು ಆರಂಭದಲ್ಲಿ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಂತರ ದೇವರಾಜು ಅರಸುರವರ ಪ್ರಭಾವಕ್ಕೊಳಗಾಗಿ ರಾಜಕೀಯ ಪ್ರವೇಶ ಮಾಡಿ ಮೂರು ಬಾರಿ ಸಚಿವರಾಗಿ ಸೇವೆಸಲ್ಲಿಸಿದ್ದರು. ಡಿ.ಟಿ.ಜಯಕುಮಾರ್‌ರವರು ಅರಸು ಕಾಂಗ್ರೆಸ್, ರೆಡ್ಡಿ ಕಾಂಗ್ರೆಸ್, ಕ್ರಾಂತಿರಂಗ ಮತ್ತು ಜನತಾ ಪರಿವಾರದಲ್ಲಿ ರಾಜಕೀಯ ಹೆಜ್ಜೆಯಿಟ್ಟಿ ಯಶಸ್ಸು ಕಂಡವರು.ಮೂಲತಃ ರಾಮನಗರ ಜಿಲ್ಲೆ ಚನ್ನಪಟ್ಟಣದ ದೇವರಹಳ್ಳಿ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಣ್ಣೀರಯ್ಯನವರ ತುಂಬು ಕುಟುಂದಲ್ಲಿ..


ಮಂದಿಗೆ ಹಂದಿಜ್ವರ, ಹಂದಿ ಉದ್ಯಮಕ್ಕೆ ಬರೆ!
ರಾಮನಗರ, ಸೆ. 15 : ಎಚ್1ಎನ್1 ಸೋಂಕು ರಾಜ್ಯವ್ಯಾಪಿ ಹರಡಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕಿಗಿಂತ ರೋಗ ಕುರಿತ ಹೆದರಿಕೆಯೇ ಜನರನ್ನು ಮತ್ತಷ್ಟು ಹಣ್ಣುನೀರು ಮಾಡಿದೆ. ಸೋಂಕಿನಿಂದ ಜನ ಬಲಿಯಾಗುತ್ತಿರುವುದು ಒಂದೆಡೆಯಾದರೆ ಈ ರೋಗವನ್ನು ಹಂದಿಜ್ವರ ಎಂದು ಹೆಸರಿರುವುದರಿಂದ ಹಂದಿ(ವರಾಹ) ಉದ್ಯಮಕ್ಕೆ ಬೇಡಿಕೆ ಇಲ್ಲದೇ ಬಾರೀ ಹೊಡೆತ ಬಿದ್ದಿದೆ.ಎಚ್1ಎನ್1 ರೋಗಕ್ಕೂ ಹಂದಿಗೂ ಯಾವ ಸಂಬಂಧವಿಲ್ಲದಿದ್ದರೂ ಜನರಿಗೆ ತಿಳಿವಳಿಕೆ..


ಎರಡನೇ ಹುಟ್ಟುಹಬ್ಬಕ್ಕೆ ರಾಮನಗರ ಜಿಲ್ಲೆ ಸಿಂಗಾರ
ರಾಮನಗರ, ಆ. 22 : ಬ್ರಿಟೀಷರ ಕಾಲದಲ್ಲಿ ಕ್ಲೋಸ್‌ಪೇಟೆಯಾಗಿದ್ದ ರಾಮನಗರ ಬ್ರಿಟೀಷರ ವಾಣಿಜ್ಯ ಕೇಂದ್ರವಾಗಿದ್ದ ಇತಿಹಾಸವಿದೆ. ರೇಷ್ಮೆನಗರಿ ಎಂಬ ಖ್ಯಾತಿಯಿರುವ ರಾಮನಗರವನ್ನ ಎಚ್.ಡಿ.ಕುಮಾರಸ್ವಾಮಿಯವರ ಆಡಳಿತಾವಧಿಯಲ್ಲಿ ಜಿಲ್ಲಾ ಕೇಂದ್ರವನ್ನಾಗಿ ಮಾಡಿ ನಾಳೆ ಆಗಸ್ಟ್ 23ಕ್ಕೆ ಎರಡು ವರ್ಷವಾಗಲಿದೆ.ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿದಾಗಿನಿಂದ ಇಂದಿನವರೆಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರಂಭಿಸಿದ್ದ..


More: 1  2  3  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Read articles written by Poornachandra Magadi from Ramnagar, in citizen journalism section. ಸಿಟಿಜನ್ ಜರ್ನಲಿಸಂ ಅಥವಾ ನಾಗರಿಕ ಪತ್ರಕರ್ತ ವಿಭಾಗದಲ್ಲಿ ಪೂರ್ಣಚಂದ್ರ ಮಾಗಡಿ ಬರೆದಿರುವ ಕನ್ನಡ ಲೇಖನಗಳನ್ನು ಓದಿರಿ.