clear
clear
clear
clear
ಮುಖಪುಟ » ನಾಗರಿಕ ಪತ್ರಕರ್ತ » ಪಾಶಾ
Read Kannada Articles

ಆರ್ಎಸ್ಎಸ್ ನಿಂದ 5 ಸಾವಿರ ಮನೆ ನಿರ್ಮಾಣ
ಶಿವಮೊಗ್ಗ, ಅ.13 : ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದಾಗಿ ಲಕ್ಷಾಂತರ ಜನರು ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಸಂತ್ರಸ್ತರಿಗೆ ನೆಲೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜ್ಯ ಘಟಕದ ವತಿಯಿಂದ 50 ಗ್ರಾಮಗಳನ್ನು ದತ್ತು ತೆಗೆದುಕೊಂಡು 5 ಸಾವಿರ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿರುವುದಾಗಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಪಟ್ಟಾಭಿರಾಮ್ ತಿಳಿಸಿದ್ದಾರೆ.ಮಂಗಳವಾರ ಕರೆಯಲಾಗಿದ್ದ


ಸಂಸದರ ನಿಧಿಯಿಂದ ನೆರೆ ಸಂತ್ರಸ್ತರಿಗೆ 25 ಲಕ್ಷ ರು.
ಶಿವಮೊಗ್ಗ, ಅ. 13 : ರಾಜ್ಯದ ಸಂಸದರು ತಮ್ಮ ಸಂಸದರ ನಿಧಿಯಿಂದ ನೆರೆ ಸಂತ್ರಸ್ತರ ಪರಿಹಾರಕ್ಕಾಗಿ 25 ಲಕ್ಷ ರೂ.ಗಳನ್ನು ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ಸಭಾಪತಿ ಮೀರಾ ಕುಮಾರಿ ಜೊತೆ ಚರ್ಚಿಸಿ, ವಿಶೇಷ ಅನುಮತಿ ಪಡೆದು ಹಣವನ್ನು ನೀಡುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದರ ನಿಧಿಯಿಂದ ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಬೇಕೆಂಬ..


2012ರ ಡಿಸೆಂಬರ್ 21ರಂದು ಕಲಿಗಾಲದ ಅಂತ್ಯ?
ಇಸ್ವಿ 2012ರ ಡಿಸೆಂಬರ್ 21ರಂದು ಪ್ರಳಯ ಸಂಭವಿಸಲಿದೆ, ಕಲಿಯುಗದ ಅಂತ್ಯವಾಗಲಿದೆ ಎಂಬ ಸುದ್ದಿ ಜ್ಯೋತಿಷ್ಯ ನಂಬುವವರ ವಲಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಕಲಿಗಾಲ, ಭವಿಷ್ಯ ಮಣ್ಣುಮಸಿ ನಂಬದವರಲ್ಲಿ ತಮಾಷೆ ಮತ್ತು ವಿಸ್ಮಯವನ್ನು ಹುಟ್ಟುಹಾಕಿದೆ. ಜಗತ್ತಿನ ಜ್ಯೋತಿಷಿಗಳೆಲ್ಲ ಗ್ರಹಗಳ ದಿಕ್ಕುದೆಸೆಗಳ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗೇ ವೆಬ್ ಸೈಟುಗಳು ಹುಟ್ಟಿಕೊಂಡಿವೆ. ಸೈಟು ಕೊಳ್ಳುವವರು ಹಿಂದೆ ಮುಂದೆ ನೋಡುತ್ತಿದ್ದಾರೆ. ಇಂಟರ್ನೆಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ...


'ಶಕ್ತಿವಂತ' ಆಯುಕ್ತ ಧರ್ಮಪ್ಪ ಲೋಕಾಯುಕ್ತ ಬಲೆಗೆ
ಶಿವಮೊಗ್ಗ, ಸೆ. 23 : ಶಿವಮೊಗ್ಗ ನಗರಸಭೆಯಲ್ಲಿದ್ದು ಸಾಕಷ್ಟು ಸುದ್ದಿಮಾಡಿದ್ದ, ಪದೇಪದೇ ವರ್ಗಾವಣೆಯಾದರೂ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪರವರ ಪ್ರಭಾವದಿಂದ ವರ್ಗಾವಣೆ ತಡೆ ಹಿಡಿದು ಮತ್ತದೇ ಸ್ಥಳದಲ್ಲಿ ಆಯುಕ್ತನಾಗಿ ಕುಳಿತುಕೊಳ್ಳುತ್ತಿದ್ದ, ಇದೀಗ ಹಾಸನದ ನಗರಸಭೆಯಲ್ಲಿ ಆಯುಕ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ಎಂ. ಧರ್ಮಪ್ಪ ಕೊನೆಗೂ ಲೋಕಾಯುಕ್ತ ಬಲೆಗೆ ಸಿಕ್ಕಿಕೊಂಡಿದ್ದಾರೆ.ರಾಜ್ಯ ಇಂಧನ ಸಚಿವ ಕೆ.ಎಸ್. ಈಶ್ವರಪ್ಪನವರ ಸಮೀಪವರ್ತಿಯಾಗಿದ್ದ ಕೆ.ಎಂ. ಧರ್ಮಪ್ಪ ಶಿವಮೊಗ್ಗದ..


ಕನ್ನಡದ ಹಬ್ಬ : ಪ್ರಶಸ್ತಿಗಾಗಿ ಪುಸ್ತಕಗಳ ಆಹ್ವಾನ
ಶಿವಮೊಗ್ಗ, ಸೆ. 21 : ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ (ರಿ), ಪ್ರೆಸ್ ಪಬ್ಲಿಸಿಟಿ ಹಾಗೂ ವಿವಿಧ ಕನ್ನಡ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನವೆಂಬರ್ ತಿಂಗಳಿನಲ್ಲಿ ಕನ್ನಡದ ಹಬ್ಬ ವಿಶೇಷ ಕಾರ್ಯಕ್ರಮಗಳನ್ನು ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಕನ್ನಡದ ಹಬ್ಬದ ವಿಶೇಷ ನೆನಪಿಗಾಗಿ ಸಾಹಿತ್ಯದ ವಿವಿಧ ಪ್ರಾಕಾರಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.ಕವನ ಸಂಕಲನ, ಕಥಾ..

ದುರ್ಗಿ ಗುಡಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನ
ಶಿವಮೊಗ್ಗ,ಸೆ. 18 : ನಗರದ ದುರ್ಗಿ ಗುಡಿಯಲ್ಲಿ ನಿನ್ನೆ ಮಧ್ಯರಾತ್ರಿ ಸಮಯದಲ್ಲಿ ಕಳ್ಳರು ಕೆಲವು ಅಂಗಡಿಗಳ ಬಾಗಿಲನ್ನು ಮುರಿದು ಕಳ್ಳತನ ಮಾಡಲು ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.ದುರ್ಗಿಗುಡಿಯ ಶನಿಮಹಾತ್ಮ ದೇವಸ್ಥಾನದ ಬಳಿಯಿರುವ ಎಸ್.ಎಲ್.ವಿ.ಮೊಬೈಲ್ ಅಂಗಡಿ, ಭರತ್ ಕಮ್ಯೂನಿಕೇಷನ್ ಹಾಗೂ ತ್ರಿಲೋಕ್ ಬಟ್ಟೆ ಅಂಗಡಿಯ ಬಾಗಿಲನ್ನು ಕಳ್ಳರು ಮುರಿದಿರುವ ಘಟನೆ ನಡೆದಿದೆ. ಆದರೆ, ತ್ರಿಲೋಕ್ ಬಟ್ಟೆ..

ಆಯುಧ ಪೂಜೆಯೂ... ಯಡಿಯೂರಪ್ಪನವರ ಅಭಿವೃದ್ಧಿಯೂ
ಶಿವಮೊಗ್ಗ, ಸೆ. 18 : ದಸರಾ ಎಂದರೆ ಶಿವಮೊಗ್ಗದ ಜನ ಆತಂಕಪಡುವ ಪರಂಪರೆ ಆರಂಭವಾಗಿದೆ. ಕಳೆದ ದಸರಾ ಹಬ್ಬದಲ್ಲಿ ಬಿ.ಎಚ್. ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆಯ ಅಕ್ಕಪಕ್ಕದಲ್ಲಿದ್ದ ದೊಡ್ಡದೊಡ್ಡ ಕಟ್ಟಡಗಳು ಉರುಳಿಬಿದ್ದಿದ್ದವು. ಬೆಳಿಗ್ಗೆ ಪೂಜೆ ಮಾಡಲೆಂದು ರಾತ್ರಿ ಸಿದ್ಧವಾಗಿ ಹೋಗಿದ್ದ ವರ್ತಕರೆಲ್ಲ ಬೆಳಿಗ್ಗೆ ತಮ್ಮ ನೆಲಸಮವಾಗಿದ್ದ ಅಂಗಡಿಗಳ ಪೂಜೆಗೆಂದು ತಂದಿದ್ದ ಹೂವು-ಹಣ್ಣನ್ನು, ಜೊತೆಗೆ ತಮ್ಮ ಕಣ್ಣೀರ ಕೋಡಿಯನ್ನು..


ಇಬ್ಬರ ಜಗಳದಲಿ ಮೂಗು ತೂರಿಸಿದ ಕರವೇ
ಶಿವಮೊಗ್ಗ, ಸೆ. 15 : ನಗರದ ಪಾರ್ಕ್ ಬಡಾವಣೆಯ ಮುಖ್ಯರಸ್ತೆಯಲ್ಲಿ ನೂತನವಾಗಿ ಆರಂಭವಾಗಿರುವ ವಾತ್ಸಲ್ಯ ಆಸ್ಪತ್ರೆ ಸಾಕಷ್ಟು ವಿವಾದದ ಕೇಂದ್ರ ಬಿಂದುವಾಗಿದ್ದು, ನಗರಸಭೆ ಸಿಬ್ಬಂದಿ ಆಕಸ್ಮಿಕವಾಗಿ ಈ ಆಸ್ಪತ್ರೆಯ ಎದುರು ಕಸ ಹಾಕಿದ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಮತ್ತು ನಗರಸಭೆಯ ಅಧಿಕಾರಿಗಳು, ಸದಸ್ಯರ ನಡುವೆ ದೊಡ್ಡ ಜಗಳವೇ ನಡೆದ ಘಟನೆ ಮಂಗಳವಾರ..

ತುಂಗಾ ನಾಲೆಗೆ ನೀರು : ಸಾರ್ವಜನಿಕರಿಗೆ ಎಚ್ಚರಿಕೆ
ಶಿವಮೊಗ್ಗ, ಸೆ.11 : ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ನಾಲೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ತೀರ್ಮಾನಿಸಲಾಗಿದ್ದು, ಯಾವುದೇ ಜನ-ಜಾನುವಾರುಗಳು ನಾಲೆಗೆ ಇಳಿಯದಂತೆ ನೋಡಿಕೊಳ್ಳಲು ಹಾಗೂ ನಾಲೆಯಲ್ಲಿ ನೀರು ಹರಿಯಬಿಡುವಾಗ ಸಾರ್ವಜನಿಕರು ಜಾಗರೂಕತೆಯಿಂದ ಇರಬೇಕೆಂದು ತುಂಗಾ ಮೇಲ್ದಂಡೆ ಯೋಜನೆ ವಲಯದ ಮುಖ್ಯ ಇಂಜಿನಿಯರ್ ಆರ್.ರುದ್ರಯ್ಯ ತಿಳಿಸಿದ್ದಾರೆ.ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲೆಯ ಕಾಮಗಾರಿಯು 272..

ಶಿವಮೊಗ್ಗ : ಗೋಪಾಲಗೌಡ ಬಡಾವಣೆಯಲ್ಲಿ ದರೋಡೆ
ಶಿವಮೊಗ್ಗ,ಸೆ. 5 : ಸುಮಾರು 5 ಜನರಿದ್ದ ಮುಸುಕುಧಾರಿಗಳ ತಂಡ ಮನೆಯೊಂದಕ್ಕೆ ನುಗ್ಗಿ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಪರಾರಿಯಾದ ಘಟನೆ ಶುಕ್ರವಾರದಂದು ಸಂಜೆ ಗೋಪಾಲಗೌಡ ಬಡಾವಣೆಯಲ್ಲಿ ನಡೆದಿದೆ.ಮಾರುತಿ ಸ್ವಿಫ್ಟ್ ಕಾರಲ್ಲಿ ಬಂದ ಐದು ಜನ ಮುಸುಕುಧಾರಿಗಳು ನೇರವಾಗಿ ಗೋಪಾಲಗೌಡ ಬಡಾವಣೆಯಲ್ಲಿ ವಾಸವಾಗಿರುವ ಬಿ.ಆರ್.ಪಿ.ಯ ಶ್ರೀರಂಭಾಪುರಿ ಕಾಲೇಜಿನ ಉಪನ್ಯಾಸಕ ಲೋಕೇಶಪ್ಪ(51)ರವರ ಮನೆಗೆ ನುಗ್ಗಿದರು. ನಂತರ,..


More: 1  2  3  4  5  6  7  
  ಸುದ್ದಿ-ರಂಜನೆ
  ವಿಡಿಯೋ
  ನುಡಿಚಿತ್ರಗಳು
 
Catch up with latest Sports news in Kannada, headlines, breaking news, from Karnataka, India and the world. Sports News covers news in from Cricket, football, tennis, hockey, formula one, ipl. T20, twenty 20, Karnataka sports news, and more. Also get Online cricket score. Get the breaking sports news in Kannada. samachara, varthegalu and latest news updates from the world of sports. Enjoy the news in Kannada For Kannadigas Worldwide. ಕರ್ನಾಟಕ, ಭಾರತ ಮತ್ತು ವಿಶ್ವದ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಇಲ್ಲಿ ಲಭ್ಯ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್, ಹಾಕಿ, ಫಾರ್ಮುಲಾ ಒನ್, ಐಪಿಎಲ್, ಟಿ20, ಟ್ವೆಂಟಿ20 ಮತ್ತು ಕರ್ನಾಟಕದ ಕ್ರೀಡಾ ವಾರ್ತೆಗಳನ್ನು ಕನ್ನಡದಲ್ಲಿ ಓದಿರಿ. ಕ್ರಿಕೆಟ್ ಸ್ಕೋರ್‌ಬೋರ್ಡ್, ಬಾಲ್ ಬೈ ಬಾಲ್ ವಿವರ ಪಡೆಯಿರಿ. ವಿಶ್ವದ ಕ್ರೀಡಾ ಸುದ್ದಿ ಸೊಗಡನ್ನು ಈ ವಿಭಾಗದಲ್ಲಿ ಸವಿಯಿರಿ.