clear
clear
clear
clear
x

ವರ್ಗಾವಣೆ : ಶಿಕ್ಷಣ ಸಚಿವರ ಶ್ಲಾಘನೀಯ ಯೋಜನೆ

ಬುಧವಾರ, ಸೆಪ್ಟೆಂಬರ್ 9, 2009, 14:41[IST]
Vote this article
Up  
Down  


{image-09-mathur-raghu2.jpg thatskannada.oneindia.in}ಉನ್ನತ ಶಿಕ್ಷಣ ಸಚಿವರಾದಂತಹ ಅರವಿಂದ ಲಿಂಬಾವಳಿಯವರು ಶಿಕ್ಷಕರ ವರ್ಗಾವಣೆಯ ವಿಷಯದಲ್ಲಿ ತೆಗೆದುಕೊಂಡಿರುವ ಯೋಜನೆಯ ನಿರ್ಧಾರದ ಬಗ್ಗೆ ಮೊನ್ನೆ ಭೇಟಿಯಾದ ಹಿರಿಯರೊಬ್ಬರು ತಿಳಿಸಿದಾಗ ಆಶ್ಚರ್ಯ ಹಾಗೂ ಸಂತೋಷ ಎರಡೂ ಒಟ್ಟಿಗೆ ಅಟ್ಟಿಸಿಕೊಂಡು ಬಂದವು.

ಮಾನ್ಯ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರಗಳನ್ನು ತಡೆಯುವ ನಿಟ್ಟಿನಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಅವಶ್ಯವಿರುವ ಶಿಕ್ಷಕರನ್ನು ಸಂದರ್ಶನ ಮಾಡಿ, ಅವರು ಇಚ್ಚಿಸಿದ ಸ್ಥಳಗಳಲ್ಲಿ ವರ್ಗಾವಣೆ ಮಾಡುವುದು ಮತ್ತು ನಿಜವಾಗಿಯೂ ಶಿಕ್ಷಕರ ಕೊರತೆಯಿದ್ದರೆ ತಕ್ಷಣವೇ ಕೆಲಸ ಆಗುವಂತೆ ಮಾಡುವತ್ತ ಸಾಗಿರುವುದು ಖಂಡಿತ ಅತ್ಯಂತ ಶ್ಲಾಘನೀಯವಾದುದು.

ಈವರೆಗೆ ತಮ್ಮ ಪ್ರಭಾವದಿಂದ ಹಾಗೂ ತಮ್ಮ ಹಣಬಲದಿಂದ ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಿದ್ದ ಪ್ರಭಾವಿಗಳು ಹಾಗೂ ಶ್ರೀಮಂತರ ನಡುವೆ, ವರ್ಗಾವಣೆಗೋಸ್ಕರ ವಿಧಾನಸೌಧಕ್ಕೆ ಅಲೆಯುವ, ಹೊಟ್ಟೆಬಾಕ ದಲ್ಲಾಳಿಗಳ ಜೇಬು ತುಂಬಿಸುವ ಮಧ್ಯಮ ವರ್ಗದವರ ನಾಯಿಪಾಡಿಗಿನ್ನು ಬಿಡುಗಡೆಯ ಸೂಚನೆ.

ಹಾಗೆಯೇ ತಮ್ಮ ಅಸಹಾಯಕತೆಯನ್ನು ವಿದ್ಯಾರ್ಥಿಗಳ ಮೇಲೆ ಪ್ರದರ್ಶಿಸುವ ಹಾಗೂ ಉದಾಸೀನತೆಯಿಂದ ಕೆಲಸ ನಿರ್ವಹಿಸುವ ಶಿಕ್ಷಕರ ಕಿರಿಕಿರಿಯ ಕಾಟ ವಿದ್ಯಾರ್ಥಿಗಳಿಗೂ ತಪ್ಪುತ್ತದೆ. ಹಾಗೂ ಫಲಾನುಭವಿ ಶಿಕ್ಷಕರಿಂದ ಇನ್ನೂ ಹೆಚ್ಚಿನ ಪ್ರಾಮಾಣಿಕ ಕರ್ತವ್ಯವನ್ನು ಅಪೇಕ್ಷಿಸಬಹುದು.

ಸಚಿವರ ಈ ಉತ್ತಮ ಯೋಜನೆಯ ಅನುಷ್ಠಾನದ ಹಿಂದೆ ಇನ್ನೂ ಹೆಚ್ಚಿನ ಪ್ರಾಮಾಣಿಕತೆಯನ್ನು ಅಪೇಕ್ಷಿಸುತ್ತ ಈ ಯೋಜನೆಯು ಧೀರ್ಘಕಾಲ ದೊರಕುವಂತಾಗಲಿ ಎಂದು ಹಾರೈಸುತ್ತೇನೆ.



ಸೆಪ್ಟೆಂಬರ್ 9, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ಹಳ್ಳಿಯವ
ದಿನಾಂಕ: 12 Sep 2009 12:39 pm
ಯಡ್ಡಿಯುರಪ್ಪ ಅವರ ಸರ್ಕಾರದಲ್ಲಿ ನಿಜವಾಗಿಯೂ ದಕ್ಷತೆಯಿಂದ ಕೆಲಸ ನಡೆಸಿರುವ ಇಲಾಖೆ ಎಂದರೆ ಶಿಕ್ಷಣ ಇಲಾಖೆ ಎಂದರೆ ತಪ್ಪಾಗಲಾರದು. ಇದರಂತೆ ಎಲ್ಲ ಇಲಾಖೆಗಳಲ್ಲಿ ಪಾರದರ್ಶಕತೆ ತಂದರೆ ರಾಜ್ಯದ ಜನತೆ ನಿರುಉಮ್ಮಳವಾಗಿರುತ್ತದೆ

ಇಂದ: ನರೇನ್
ದಿನಾಂಕ: 10 Sep 2009 2:22 pm
ತುಂಬಾ ಒಳ್ಳೆಯ ಕೆಲಸ , ಶಹಭಾಶ್

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು