clear
clear
clear
clear
x
ಮುಖಪುಟ » ಸುದ್ದಿಜಾಲ » ಪೂರ್ಣಪಾಠ

ವಿಶ್ವ ತುಳು ಸಮ್ಮೇಳನಕ್ಕೆ ಹೀಗೊಂದು ಮುನ್ನುಡಿ

ಸೋಮವಾರ, ಅಕ್ಟೋಬರ್ 5, 2009, 11:04[IST]
Vote this article
Up  
Down  


{image-05-tulu-sammelana1.jpg thatskannada.oneindia.in}ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳನ್ನು ಒಳಗೊಂಡ ಕರಾವಳಿಯಲ್ಲಿ ತುಳು ಮಾತೃಭಾಷೆ, ವ್ಯವಹಾರದ ಭಾಷೆ, ಸಂಪರ್ಕದ ಭಾಷೆ. ತುಳು ಕೇವಲ ಭಾಷೆಯಲ್ಲ ಅದು ಇಲ್ಲಿನ ಜನರ ಬದುಕಿನ ಭಾಗವೂ ಹೌದು. ತುಳು ಸಂಸ್ಕೃತಿಯಾಗಿಯೂ ಬೆಳೆದು ಬಂದಿದೆ. ಹಬ್ಬ, ಆಚರಣೆ, ನಂಬಿಕೆ-ನಡವಳಿಕೆ ಹೀಗೆ ಎಲ್ಲವುದರಲ್ಲೂ ವಿಭಿನ್ನತೆ ಇದೆ, ಆದ್ದರಿಂದಲೇ ಇದಕ್ಕೆ ತನ್ನದೇ ಆದ ಐಡೆಂಟಿಟಿ ಇದೆ.

* ಚಿದಂಬರ ಬೈಕಂಪಾಡಿ, ಮಂಗಳೂರು

ದ್ರಾವಿಡ ಭಾಷೆಯೆಂದೂ ಕರೆಯಲಾಗುವ ತುಳುವಿನ ಬಗ್ಗೆ ತಾತ್ಸಾರ ಯಾಕೆಂದರೆ ಈ ಭಾಷೆಗೆ ಸ್ವಂತ ಲಿಪಿ ಇಲ್ಲ ಎನ್ನುವುದು. ಆದರೆ ಈ ಕೊರಗನ್ನೂ ಸಂಶೋಧಕರು ನಿವಾರಿಸಿಕೊಟ್ಟಿದ್ದಾರೆ, ಲಿಪಿ ಹುಡುಕಿಕೊಟ್ಟು. ಈ ಲಿಪಿಯ ಬಳಕೆ ಇನ್ನೂ ಸಾಧ್ಯವಾಗಿಲ್ಲ, ಇದಕ್ಕೆ ಅನೇಕ ಕಾರಣಗಳಿವೆ.

ಇಂಥ ತುಳು ಭಾಷೆ ನಶಿಸುತ್ತಿದೆಯಂತೆ. ಹೀಗೆಂದು ಯುನೆಸ್ಕೋ ವರದಿ ಹೊರಬಿದ್ದಿದೆ. ಅದೇನೇ ಇರಲಿ ಈಗ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಹೇಗೆ ಎನ್ನುವುದು ನಮ್ಮನ್ನು ಕಾಡುತ್ತಿರುವ ಪ್ರಶ್ನೆ. ಭಾಷೆ, ನೆಲ-ಜಲ, ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೂ ಈ ಭಾಷೆ ಉಳಿಯುವಂತೆ ಮಾಡಲು `ವಿಶ್ವತುಳು ಸಮ್ಮೇಳನ' ಆಯೋಜಿಸಲಾಗುತ್ತಿದೆ.

ಡಿಸೆಂಬರ್ 10ರಿಂದ 13ರವರೆಗೆ ಉಜಿರೆಯಲ್ಲಿ ನಡೆಯಲಿರುವ ಈ ವಿಶ್ವತುಳು ಸಮ್ಮೇಳನ ತುಳುವರ ಸ್ವಾಭಿಮಾನದ ಸಮ್ಮೇಳನವೂ ಹೌದು. ಇಂಥ ಐತಿಹಾಸಿಕ ಸಮ್ಮೇಳನದ ಸಾರಥ್ಯವಹಿಸಿಕೊಂಡಿರುವವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ. ಧರ್ಮಸ್ಥಳ ಕ್ಷೇತ್ರವನ್ನು ಅಣ್ಣಪ್ಪನ ಆಣತಿಯಂತೆ, ಧರ್ಮದೇವತೆಗಳು ಮತ್ತು ಮಂಜುನಾಥನ ಆಸರೆಯಲ್ಲಿ ಮುನ್ನಡೆಸುತ್ತಿರುವ ಹೆಗ್ಗಡೆಯವರು ಎಲ್ಲರಿಗೂ ಬೇಕಾದವರು ಮಾತ್ರವಲ್ಲ ಹೊಸತನಕ್ಕೆ ತೆರೆದುಕೊಳ್ಳುವ ಮನಸ್ಸುಳ್ಳವರು, ಆದರಿಂದಲೇ ಈ ಸಮ್ಮೇಳದ ಬಗ್ಗೆ ಬಹಳಷ್ಟು ನಿರೀಕ್ಷೆ-ಕುತೂಹಲ.

ಕೋಡೆ-ಇನಿ-ಯೆಲ್ಲೆ (ನಿನ್ನೆ-ಇಂದು-ನಾಳೆ) ಎನ್ನುವ ಆಶಯದೊಂದಿಗೆ ಈ ಸಮ್ಮೇಳನ ಜರಗಲಿದೆ. ಸಮ್ಮೇಳನದ ಯಶಸ್ಸಿಗಾಗಿ ಹಲವು ಉಪಸಮಿತಿಗಳನ್ನು ರಚಿಸಲಾಗಿದೆ. ಅವುಗಳಿಗೆ ಅವುಗಳದ್ದೇ ಆದ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಸಮ್ಮೇಳನ ಮಾಡುವುದರಿಂದ ಸಾಧಿಸುವುದೇನು? ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿದೆ, ಆದರೆ ಇಂಥ ಪ್ರಶ್ನೆಗಳಿಗೆ ಉತ್ತರಕೊಟ್ಟರೂ ಪ್ರಯೋಜನವಿಲ್ಲ. ಒಂದಷ್ಟು ಮಂದಿ ಚಿಂತಕರು ತಮ್ಮ ಚಿಂತನೆಗಳನ್ನು ಹಂಚಿಕೊಂಡು, ಒಂದಷ್ಟು ಮಂದಿಗೆ ಚಿಂತೆ ಹತ್ತಿಸಿದರೆ ಸಮ್ಮೇಳನ ಸಾರ್ಥಕ. ಪಾಶ್ಚಾತ್ಯ ಸಂಸ್ಕೃತಿಗಳ ದಾಳಿಯಿಂದ ನಮ್ಮ ಭಾಷೆ, ಸಂಸ್ಕೃತಿ ತತ್ತರಿಸುತ್ತಿದೆ. ಮನೆಯಲ್ಲೇ ಅಕ್ಕಿ, ಉದ್ದಿನಬೇಳೆಯನ್ನು ರುಬ್ಬಿ ದೋಸೆ, ಇಡ್ಲಿ ಮಾಡುವ ಬದಲು ರೆಡಿಮಿಕ್ಸ್ ತಂದು ರಿಲ್ಯಾಕ್ಸ್ ಆಗುತ್ತೇವೆ. ಶಾವಿಗೆ ತಿನ್ನಲು ಮುಖತಿರುಗಿಸುವ ಮಕ್ಕಳು ಮ್ಯಾಗಿ ಅಂದರೆ ಸಾಕು ಆಗಸವೇ ಕೈಗೆಸಿಕ್ಕಿದಷ್ಟು ಖುಶಿಪಡುತ್ತವೆ. ಗಂಜಿ, ರಾಗಿ ಮಣ್ಣಿ ಅಥವಾ ಅಂಬಲಿ ಕುಡಿಯಲು ಒಪ್ಪದ ಮಕ್ಕಳು ಪಿಜ್ಜಾ ಸವಿಯಲು ಪೀಡಿಸುತ್ತವೆ- ಇವು ವಾಸ್ತವ ಅಲ್ಲವೇ? ಆದ್ದರಿಂದ ನಾವೆಲ್ಲಿ ಎಡವಿದೆವು-ಮುಂದೇನು ಮಾಡಬೇಕು ಎನ್ನುವುದನ್ನು ಚಿಂತಿಸಲು ಸಕಾಲ. ಇನ್ನೂ ಮೌನವಾಗಿದ್ದರೆ ನಮ್ಮ ಊರುಗಳಿಗೂ ಅಮೇರಿಕಾ, ಜರ್ಮನ್, ಜಪಾನ್, ಥೈಲ್ಯಾಂಡ್ ದೇಶದ ತಿಂಡಿಗಳ ಹೆಸರಿಟ್ಟರೂ ಅಚ್ಚರಿಯಿಲ್ಲ.

ಈ ದೇಶಗಳ ಒಳ್ಳೆಯತನವನ್ನು ಅರಗಿಸಿಕೊಳ್ಳಬೇಕೇ ಹೊರತು ಆ ದೇಶಗಳ ಸಂಸ್ಕೃತಿಯೊಳಗೆ ಲೀನವಾಗುವುದಲ್ಲ. ಈ ಎಚ್ಚರಿಕೆಯನ್ನು ಮೂಡಿಸಲು ವಿಶ್ವತುಳುಸಮ್ಮೇಳನ ನಾಂದಿಯಾಗುತ್ತದೆ. ಯಾಕೆಂದರೆ ಕರಾವಳಿ ಮೂಲದ ಜನರು ಜಗತ್ತಿನ ಮೂಲೆ ಮೂಲೆಗಳಲ್ಲಿದ್ದಾರೆ. ಅವರ ಬೇರುಗಳು ಈ ನೆಲದಿಂದ ಕಳಚಿಕೊಳ್ಳುತ್ತಿವೆ. ಇದನ್ನು ತಪ್ಪಿಸಲು ಮತ್ತು ಹೊಸಬೀಜಗಳನ್ನು ಈ ಮಣ್ಣಿನಲ್ಲಿ ಬಿತ್ತಿ ಬೆಳೆಸಲು ಸಮ್ಮೇಳನ ನೆರವಾಗುತ್ತದೆನ್ನುವ ಆಶಯ.

ಸಮ್ಮೇಳನ ಮತ್ತೊಂದು ಜಾತ್ರೆ ಎನ್ನುವವರೂ ಇದ್ದಾರೆ. ನಾವು ಬದುಕುತ್ತಿರುವುದೂ ಕೂಡಾ ಸಂತೆಯಲ್ಲಿ ಎನ್ನುವ ಕಿರುಮಾತು ಅವರಿಗೆ. ಸಂತೆಯೊಳಗೆ ಸುತ್ತಾಡುತ್ತಲೇ ಕಳೆದುಹೋಗಿರುವ-ಕಳೆದುಹೋಗುತ್ತಿರುವ ಸ್ವಂತಿಕೆ,ಸ್ವಾಭಿಮಾನವನ್ನು ಮರಳಿಪಡೆಯುವ ಹಾಗೂ ಇರುವುದು ಕಳೆದು ಹೋಗದಂತೆ ನಿಗಾವಹಿಸುವ ಕುರಿತು ಚಿಂತಿಸೋಣ.



ಅಕ್ಟೋಬರ್ 5, 2009 ರ ಇತರೆ ಸುದ್ದಿ/ಲೇಖನಗಳನ್ನು ಓದಿ
User Comments
[ ಅಭಿಪ್ರಾಯ ಬರೆಯಿರಿ ]
ಇಂದ: ವೀರೇಶ್ yermal
ದಿನಾಂಕ: 11 Dec 2009 4:01 pm
ತುಳು ವಿಶ್ವ ಸಮ್ಮೇಳನ ಒಂಜಿ ಭಾರಿ ದಿನ್ನದ ಕೆಲಸ ಅವೆನ್ ಪೋರ್ಲುದು ಮಳ್ತ್ಹೊಂದುಪ್ಪುನ ದೇವೆರೆ ಕೆಲಸ ಬಂಗ ಬತ್ತಿನ ಮಥೆರೆಗ್ಲ ದಿಂಜಿ ತಿಗಳೆದ ಸೊಲ್ಮೆಲು ಉಂದು ಸಂಪೂರ್ಣ ಯಸಸ್ವಿ ಆವಡ್

ಇಂದ: reader
ದಿನಾಂಕ: 09 Oct 2009 12:48 pm
ಅಲ್ರಿ ಕುಡ್ಲದವರೇ ವೈಕಿಪೀಡೆ ಬೇಕೆನ್ರಿ ಸಾಕ್ಶಿಗೆ ? ಅದರಲ್ಲಿ ನಾಲ್ಕು ಜನ ಸೇರಿಕೋಂಡರೆ ಸುಳ್ಳನ್ನು ನಿಜ ಮಡ್ತಾರೆ . ಓದಿ ನೋಡಿ ಕರ್ನಾಟಕ ಸಂಗೀತನ ’ಕ್ಯಾರೇನಾತಕ್’ ಮಾಡಿದ್ದಾರೆ. ಶ್ರಿ ಪುರಂದರ ದಾಸರು ತ್ಯಾಗರಜರ ಜೊತೆ ೧೬ನೇ ಶತಮಾನದಲ್ಲಿ ಇದ್ದದ್ದು ಎಂದು ಎದೆ ಉಬ್ಬಿಸ್ಕೊಂಡು ಸುಳ್ಳು ಬರದವರೆ. ಬೆರೆ ಎನಾದರು ಒಳ್ಳೆ ಪುಸ್ತಕ ಇದ್ದರೆ ಸಾಬಿತು ಕೊಡಿ.

[ ಅಭಿಪ್ರಾಯ ಬರೆಯಿರಿ ]
  ಸುದ್ದಿ-ರಂಜನೆ
Live Chat with a Doctor
ದಟ್ಸ್ ಕನ್ನಡ ಡಾಕ್ಟರೊಂದಿಗೆ ಚಾಟ್
  ವಿಡಿಯೋ
  ನುಡಿಚಿತ್ರಗಳು