ಶ್ರೀಪಾದ ಸಂಗೀತ ಕಲಾ ಕೆಂದ್ರದ ಆರಂಭಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಪಾಂಡುರಂಗ ನಗರದಲ್ಲಿ ಶ್ರೀಪಾದ ಸಂಗೀತ ಕಲಾ ಕೇಂದ್ರವು ದಿನಾಂಕ ಆಗಸ್ಟ್ 8ರ ಶನಿವಾರದಂದು ಕಾರ್ಯಾರಂಭಗೊಂಡಿದೆ.ಇಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ : ಗಾಯನ ಮತ್ತು ವಾದ್ಯಗಳು (ತಬಲಾ, ಕೊಳಲು, ಹಾರ್ಮೋನಿಯಂ, ಕೀ ಬೋರ್ಡ್, ಪಿಟೀಲು), ನೃತ್ಯ, ಚಿತ್ರಕಲೆ ವಿಷಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಆಯಾಯ ವಿಷಯಗಳಲ್ಲಿ ಪಾಂಡಿತ್ಯ...
ಅವನತಿಯತ್ತ ಕನ್ನಡ ಚಿತ್ರ ಸಾಹಿತ್ಯ, ಸಂಗೀತಯಾವತ್ತಿನವರೆಗೆ ಕನ್ನಡ ಜನತೆ ಕಳಪೆ ಗುಣಮಟ್ಟದ ಚಿತ್ರಗಳನ್ನು ಮತ್ತು ಹಾಡುಗಳನ್ನು ಬಹಿಷ್ಕರಿಸುವುದಿಲ್ಲವೋ, ಯಾವತ್ತಿನವರೆಗೆ ಕನ್ನಡ ಚಲನಚಿತ್ರದ ಸೆನ್ಸಾರ್ ಮಂಡಳಿಯು ಇಂತಹ ಅರ್ಥಹೀನ, ಕೀಳು ಅಭಿರುಚಿಯ ಚಲನಚಿತ್ರಗಳಿಗೆ ಕತ್ತರಿಹಾಕುವುದಿಲ್ಲವೋ ಅಲ್ಲಿಯ ತನಕ ಇದನ್ನೆಲ್ಲಾ ಸಹಿಸಿಕೊಳ್ಳಬೇಕಾದ ದೌರ್ಭಾಗ್ಯ ನಮ್ಮದು.* ಅರ್ಚನಾ ಹೆಬ್ಬಾರ್, ಬೆಂಗಳೂರುಕನ್ನಡ ಚಲನಚಿತ್ರ ಸಂಗೀತ ಕೇಳುವ ಸೌಭಾಗ್ಯ ಒದಗಿ ಬರುವುದು ನಾನು ಆಫೀಸ್ ಕ್ಯಾಬ್ ನಲ್ಲಿ ಪ್ರಯಾಣಿಸುವಾಗ ಮಾತ್ರ...
ಬೆಂಗಳೂರು ಗೋ ಗ್ರೀನ್...ರಸ್ತೆ ಅಗಲೀಕರಣ, ಅಂಡರ್ ಪಾಸ್ ಅಥವಾ ಮೇಲ್ಸೇತುವೆ ನಿರ್ಮಾಣ, ಮೆಟ್ರೋ ರೈಲು ಯೋಜನೆಗಳ ನೆವ ಒಡ್ಡಿಕೊಂಡು ಮತ್ತು ವಿನಾಕಾರಣ ಬೆಂಗಳೂರಿನ ಅಂದ ಹೆಚ್ಚಿಸಿದ್ದ ಸಾವಿರಾರು ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸಿಹಾಕಲಾಗಿದೆ. ಒಂದಾನೊಂದು ಕಾಲದಲ್ಲಿ ಹಸಿರು ಹೊದಿಕೆ ಹೊದ್ದಿದ್ದ ಬೆಂಗಳೂರು ಉದ್ಯಾನ ನಗರಿಯ ಪಟ್ಟ ಎಂದೋ ಕಳೆದುಕೊಂಡಿದೆ. ರಸ್ತೆ ಅಗಲೀಕರಣದ ನಂತರವೂ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿದ್ದು ಅಪರೂಪವೆ. ಆದಾಗ್ಯೂ..
ನೀವೂ ಮೋಸ ಹೋದೀರಿ ಎಚ್ಚರಿಕೆ!ಇಂಟರ್ನೆಟ್ ಯುಗದಲ್ಲಿ ಯಾವುದೂ ಸುರಕ್ಷಿತವಲ್ಲ. ನಮ್ಮ ಕ್ರೆಡಿಟ್ ಕಾರ್ಡ್ ಅಕೌಂಟ್, ಬ್ಯಾಂಕ್ ಅಕೌಂಟ್... ಕೊನೆಗೆ ನಮ್ಮ ವೈಯಕ್ತಿಕ ವಿವರಗಳು ಕೂಡ ನಮಗರಿವಿಲ್ಲದಂತೆ ಇಂಟರ್ನೆಟ್ ಪಾಲಾಗಿರುತ್ತವೆ. ಪೊಲೀಸರಿಗೆ ಕೂಡ ಇಂಥ ಅಪರಾಧಗಳು ಹೊಸದಾಗಿದ್ದು, ಮೋಸಗಾರರನ್ನು ಹುಡುಕುವಲ್ಲಿ ಹರಸಾಹಸಪಡುತ್ತಿದ್ದಾರೆ. ಆದರೆ, ನಾವಾದರೂ ಸುಮ್ಮನಿದ್ದರಾದೀತೆ? ಇಂಥ ಅಪರಾಧಗಳ ಕುರಿತು ಜನಜಾಗೃತಿ ಬೆಳೆಸಿ. ಇಂಟರ್ನೆಟ್ ಮುಖಾಂತರವೇ ಜಾಗೃತಿ ಎಲ್ಲರಲ್ಲಿ ಮೂಡಲಿ.* ಅರ್ಚನಾ ಹೆಬ್ಬಾರ್..
ಬೇಸಿಗೆಯಲ್ಲಿ ತಂಪಾಗಿಸುವ ಮೆಂತೆ ತಂಬುಳಿದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ತಯಾರಿಸುವ ಒಂದು ಬಗೆಯ ಮೇಲೋಗರಕ್ಕೆ ’ತಂಬುಳಿ’ ಎಂದು ಹೆಸರು. ಬಿಸಿ ಬಿಸಿ ಅನ್ನಕ್ಕೆ ತಂಪಾದ ಈ ತಂಬುಳಿಯನ್ನು ಕಲಸಿಕೊಂಡು ಊಟ ಮಾಡುವುದೆಂದರೆ..ಆಹಾ..ಎಂಥ ರುಚಿ! ತಂಬುಳಿಯ ಮೂಲವಸ್ತು : ತೆಂಗಿನಕಾಯಿ ತುರಿ ಮತ್ತು ಮಜ್ಜಿಗೆ. ಮತ್ತೆ ಒಗ್ಗರಣೆ. ಮೆಂತೆ ತಂಬುಳಿ, ಒಂದೆಲಗದ ತಂಬುಳಿ, ಶುಂಠಿ ತಂಬುಳಿ, ದೊಡ್ಡ ಪತ್ರೆ ತಂಬುಳಿ, ಮಾವಿನ..